ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

Mainashree
Updated On : 12 Sept 2013, 10:19 am

ಅರಸೀಕೆರೆ: ಪಟ್ಟಣದಲ್ಲಿ ಗುರುವಾರ ಸತತ 3 ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಯಿಂದಾಗಿ ಕೆಲಕಾಲ ಪಟ್ಟಣದ ಜನ ಜೀವನ ಅಸ್ತವ್ಯಸ್ತವಾಯಿತು. ವರುಣನ ಆರ್ಭಟಕ್ಕೆ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾದರೆ ಹಾಸನ ರಸ್ತೆಯ ಎಡ ಹಾಗೂ ಬಲ ಭಾಗದ ಬಡಾವಣೆಗಳೂ ಸೇರಿದಂತೆ ಸರಸ್ವತೀಪುರಂ, ಕಂತೇನಹಳ್ಳಿ, ಪ್ರತಿಭಾ ಕಾಲೇಜು ಅಕ್ಕಪಕ್ಕ ಇಂದಿರಾ ನಗರ ಹಾಗೂ ಗರುಡನಗಿರಿ ರಸ್ತೆಯ ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಈ ಭಾಗದಲ್ಲಿ ತೀವ್ರ ತೊಂದರೆ ಅನುಭವಿಸುವಂತಾಯಿತು. ಇನ್ನು ರಾಷ್ಟ್ರೀಯ ಹೆದ್ದಾರಿ ಬಿ.ಎಚ್. ರಸ್ತೆಯ ಎರಡೂ ಬದಿಯ ಚರಂಡಿಗಳು ಒಳಗೊಂಡಂತೆ ಹಾಸನ ರಸ್ತೆ ಶಾನುಭೋಗರ ಬೀದಿ ಸಾಯಿನಾಥ ರಸ್ತೆ ಲಕ್ಷ್ಮೀಪುರ ಬಡಾವಣೆಯ ಕೆಲವು ರಸ್ತೆಗಳ ಬದಿ ಕೆಲವು ಚರಂಡಿಗಳಲ್ಲಿ ತಿಂಗಳಾನುಗಟ್ಟಲೆಯಿಂದ ಕಸ ಕಟ್ಟಿದ್ದರಿಂದ ಮಳೆ ನೀರು ಸರಾಗವಾಗಿ ಸಾಗದೇ ರಸ್ತೆಗಳ ಮೇಲೆ ಹರಿದಿದ್ದರಿಂದ ಚರಂಡಿಯಲ್ಲಿದ್ದ ತ್ಯಾಜ್ಯಗಳು ರಸ್ತೆ ಮೇಲೆ ಹರಿಯುತ್ತಿದ್ದ ದೃಶ್ಯ ಕಂಡು ಬಂತು. ಮಧ್ಯಾಹ್ನ 2.15ಕ್ಕೆ ಆರಂಭವಾದ ಮಳೆ 6.30ರವರೆಗೂ ಬಿರುಸಿನಿಂದ ಸುರಿಯಿತು. ಶಾಲಾ ಕಾಲೇಜು ಬಿಡುವ ಸಮಯವಾದ್ದರಿಂದ ವಿದ್ಯಾರ್ಥಿಗಳು ತಮ್ಮ ಮನೆ ಸೇರಲು ತೊಂದರೆ ಅನುಭವಿಸುವಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement