ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ತೇಜಸ್ವಿ ಸಾಹಿತ್ಯದ ತೇಜಸ್ಸು'

Mainashree
Updated On : 13 Sept 2013, 9:05 am

ಕ.ಪ್ರ.ವಾರ್ತೆ  ಹಾಸನ  ಸೆ.13
ತೇಜಸ್ವಿ ಸಾಹಿತ್ಯ ಗಂಗೆಯಂತೆ ನಿರಂತರವಾಗಿ ಹರಿಯುತ್ತಿರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮತ್ತು ಯೋಗ ಶಿಕ್ಷಕ ಎಚ್.ಬಿ. ರಮೇಶ್ ಹೇಳಿದರು.
ನಗರದ ಮಹಾರಾಜ ಪಾರ್ಕ್ ಆವರಣದಲ್ಲಿರುವ ಯೋಗಶಾಲೆಯಲ್ಲಿ ಏರ್ಪಡಿಸಿದ್ದ ಪೂರ್ಣಚಂದ್ರ ತೇಜಸ್ವಿ 75ನೇ ಜನ್ಮ ದಿನಾಚರಣೆ ನೆನಪಿನ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ತೇಜಸ್ವಿ ಒಬ್ಬ ಸಾಧಕನಾಗಿ ಸಾಹಿತ್ಯದ ಮೂಲಕ ಎಲ್ಲೆಡೆ ಮೆಚ್ಚುಗೆ ಪಡೆದವರು. ಕುವೆಂಪು ಅವರ ತೇಜಸ್ಸು ತೇಜಸ್ವಿ ಆಗಿದೆ. ಪೂರ್ಣಚಂದ್ರ ತೇಜಸ್ವಿ ಎಂದಿಗೂ ಅಪ್ಪನ ಮಾತನ್ನು ಮೀರಲಿಲ್ಲ. ಅವರ ಮಾರ್ಗದರ್ಶನದಲ್ಲಿ ನಾಡಿಗೆ ಅಪಾರ ಕೊಡುಗೆ ನೀಡಿದವರು. ತೇಜಸ್ವಿ ಸಾಹಿತ್ಯದ ತೇಜಸ್ಸು ಎಂದ ಅವರು, ತೇಜಸ್ವಿ ಸಂಶೋಧಕರು, ಕಥೆಗಾರರು, ಸಾಹಿತ್ಯಗಾರರು ಮತ್ತು ಉತ್ತಮ ಛಾಯಾಗ್ರಾಹಕರೂ ಆಗಿದ್ದರು ಎಂದು ತಿಳಿಸಿದರು. ಕುವೆಂಪು ಪ್ರತಿಮೆ ಇರುವಂತೆ ತೇಜಸ್ವಿ ಕಟ್ಟೆ ಕಟ್ಟಲೇಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಜಿ. ಕವಿತ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ತಂದೆ ಉಪಕುಲಪತಿಯಾಗಿದ್ದರು. ಮಗ ಕುಲಪತಿ ಆಗುವ ಎಲ್ಲಾ ಅರ್ಹತೆ ಇತ್ತು. ತೇಜಸ್ವಿ ಬದುಕು ಮತ್ತು ಬರಹ ಎರಡೂ ಒಂದೇ ಆಗಿತ್ತು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಜನಾರ್ದನ್, ಕಸಾಪ ಸಂಘಟನಾ ಕಾರ್ಯದರ್ಶಿ ಅಂದಾನಿಗೌಡ, ಶ್ರೀನಿವಾಸಗೌಡ ಇತರರು ಇದ್ದರು. ಕಸಾಪ ಶಿವೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement