ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಡುರಸ್ತೆಯಲ್ಲಿ ವಾಹನ ನಿಲ್ಲಿಸಿ ಪ್ರತಿಭಟನೆ

Mainashree
Updated On : 13 Sept 2013, 11:15 am

ಹಾಸನ: ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಪಡಿಸುವಂತೆ ಆಗ್ರಹಿಸಿ ನಗರದ ತಣ್ಣೀರಹಳ್ಳದಲ್ಲಿ ಸಾರ್ವಜನಿಕರು ಶುಕ್ರವಾರ ರಸ್ತೆ ತಡೆ ಕೈಗೊಂಡು ಪ್ರತಿಭಟನೆ ನಡೆಸಿದರು.
ಹದಗೆಟ್ಟಿರುವ ರಸ್ತೆಯ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.
ನಗರದ ತಣ್ಣೀರುಹಳ್ಳದಿಂದ ಬೈಪಾಸ್ ಸೇರುವ ರಸ್ತೆಯನ್ನು ದುರಸ್ತಿ ಪಡಿಸಿ ಕೇವಲ ನಾಲ್ಕೈದು ತಿಂಗಳು ಕಳೆದಿದ್ದು, ಇಷ್ಟು ಬೇಗ ರಸ್ತೆಗಳು ಹಾಳಾಗಿದೆ. ಮಂಡಿ ಎತ್ತರದಷ್ಟು ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಮಳೆಯ ನೀರು ಗುಂಡಿಗಳಲ್ಲಿ ನಿಂತಿರುವುದರಿಂದ ಕೆರೆಯ ವಾತಾವರಣ ನಿರ್ಮಾಣವಾಗಿದೆ. ರಸ್ತೆ ಡಾಂಬರೀರಣಗೊಂಡು ಕೆಲವೇ ತಿಂಗಳು ಕಳೆಯುವಷ್ಟರಲ್ಲಿ ರಸ್ತೆ ಹಾಳಾಗಿದೆ ಎಂದು ಆರೋಪಿಸಿದರು.
ಚುನಾವಣೆಯ ದೃಷ್ಟಿಯಿಂದ ಆತರವಾಗಿ ರಸ್ತೆಯನ್ನು ಡಾಂಬರೀಕರಣಗೊಳಿಸಿದರು. ಇದರಿಂದ ಕೋಟ್ಯಂತರ ರು. ವ್ಯರ್ಥವಾಗಿದೆ. ಕೇವಲ ಗುತ್ತಿಗೆದಾರರಿಗೆ ಹಣ ಮಾಡಿಕೊಡುವ ಹಿನ್ನೆಲೆಯಲ್ಲಿ ಈ ರೀತಿಯ ರಸ್ತೆಗಳ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.
ರಸ್ತೆ ಕಾಮಗಾರಿಗಳನ್ನು ಒಬ್ಬನೇ ಗುತ್ತಿಗೆದಾರನಿಗೆ ನೀಡುವುದರಿಂದ ಈ ರೀತಿಯ ಕಳಪೆ ಕಾಮಗಾರಿ ನಡೆದಿದೆ. ಕೂಡಲೇ ಸಂಬಂಧಪಟ್ಟವರು ರಸ್ತೆ ದುರಸ್ತಿ ಪಡಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ರಮೇಶ್, ದಿನೇಶ್, ಉಮೇಶ್, ರವಿಕುಮಾರ್, ಮಂಜುನಾಥ್, ಪ್ರವೀಣಕುಮಾರ್, ಸೈಯದ್, ಮೋಹನ್, ಶ್ರೀನಿವಾಸ್, ಪುರುಷೋತ್ತಮ್, ಕಿರಣ್, ಪ್ರಸಾದ್, ಕುಮಾರ್, ರಾಜು, ಪ್ರದೀಪ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement