ಮಳೆಗೆ ಮನೆಗಳು ಕುಸಿತ
ಕ.ಪ್ರ.ವಾರ್ತೆ ಜಾವಗಲ್ ಸೆ. 13
ಜಾವಗಲ್ ಸುತ್ತಮುತ್ತ ಕಳೆದ 4-5 ದಿನಗಳಿಂದ ಬಿದ್ದ ಮಳೆಯಿಂದಾಗಿ ನಾಲ್ಕೈದು ಮನೆಗಳು ಕುಸಿದು ಬಿದ್ದು ಸುಮಾರು ಲಕ್ಷ ರು.ಗೂ ಹೆಚ್ಚಿನ ಹಾನಿಯಾಗಿದೆ ಎಂದು ನಾಡ ಕಚೇರಿ ಉಪತಹಸೀಲ್ದಾರ್ ಅಶೋಕ್ ತಿಳಿಸಿದ್ದಾರೆ. ಗ್ರಾಮದ ಲಕ್ಷ್ಮೀಪುರ ಬಡಾವಣೆಯ ನಂದಿನಿಮೂರ್ತಿ ಎಂಬುವವರ ಮನೆ ಕುಸಿದು ಬಿದ್ದಿದೆ. ಗಾಂಧಿನಗರ ಬಡಾವಣೆಯ ಈರಯ್ಯ ಎಂಬುವವರ ಜನತಾಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಕೆರೆಕೋಡಿಹಳ್ಳಿ ಗ್ರಾಮದ ಗಂಗಮ್ಮಗೋವಿಂದಗೌಡ, ಧನಂಜಯಪುರ ಗ್ರಾಮದ ಬೀರೇಗೌಡ ಮತ್ತು ಪುಟ್ಟೆಗೌಡ ಎಂಬುವವರ ಮನೆಗಳು ಕುಸಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಉಪ ತಹಸೀಲ್ದಾರ್ ಅಶೋಕ್ ಹಾಗೂ ರಾಜಸ್ವ ನಿರೀಕ್ಷಕ ಮುದ್ದುವೀರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.