ವಿದ್ಯುತ್ ಕಂಬಕ್ಕೆ ಜಾನುವಾರು ಕಟ್ಟದಂತೆ ಸೂಚನೆ
ಹಾಸನ: ದುದ್ದ ಉಪ ವಿಭಾಗ ಸೆಸ್ಕ್ ಹಾಸನದ ದುದ್ದ ಶಾಖಾ ವ್ಯಾಪ್ತಿಗೆ ಬರುವ ಹೊಸದಾಗಿ ನಿರ್ಮಾಣಗೊಂಡ 11 ಕೆವಿ ಮಾರ್ಗವನ್ನು ಚೇತನಗೊಳಿಸುವ ಕಾರ್ಯಕ್ರಮ ಸೆ.16 ರಂದು ಹಮ್ಮಿಕೊಂಡಿದ್ದು, ತದ ನಂತರವು ಫೀಡರ್ ಚಾಲನೆಯಲ್ಲಿ ಇರುತ್ತದೆ. ಗ್ರಾಮಸ್ಥರು11 ಕೆವಿ ಮಾರ್ಗಗಳಲ್ಲಿನ ಕಂಬಗಳಿಗೆ ಯಾವುದೇ ಜಾನುವಾರುಗಳನ್ನು ಕಟ್ಟುವುದು, ಮಾರ್ಗಗಳ ಕೆಳಗೆ ಒಣ ಹುಲ್ಲು ಶೇಖರಣೆ ಮಾಡಬಾರದು ಹಾಗೂ ಹೊಸದಾಗಿ ನಿರ್ಮಾಣಗೊಂಡಿರುವ ಮಾರ್ಗಕ್ಕೆ ಯಾವುದೇ ರೀತಿಯ ಟ್ಯಾಪಿಂಗ್ ಮಾಡಿಕೊಂಡಿದ್ದರೆ ಮುಂದೆ ಆಗುವ ಅನಾಹುತಗಳಿಗೆ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ದುದ್ದ ಉಪ ವಿಭಾಗ ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.