10 ಜೂಜುಕೋರರ ಬಂಧನ
ಹಾಸನ: ನಗರದ ಆಜಾದ್ರಸ್ತೆಯಲ್ಲಿ ಅಂದರ್ಬಾಹರ್ ಜೂಜಾಡುತ್ತಿದ್ದ 10 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಟ್ಟಾಯ ಹೋಬಳಿ ಕಿತ್ತಾನೆ ಕೊಪ್ಪಲಿನ ಹೇಮಂತಕುಮಾರ (33), ಮಾರಿಗುಡಿಕೊಪ್ಪಲಿನ ಈರೇಗೌಡ (33), ಬನವಾಸೆ ಗ್ರಾಮದ ರಂಗನಾಥ (28), ಬಸ್ತಿಹಳ್ಳಿ ಗ್ರಾಮದ ನಾಗೇಶ (27), ಗಣೇಶ (27), ಬನವಾಸೆ ಗ್ರಾಮದ ಮಂಜುನಾಥ (32), ಹಾಸನದ ವಲ್ಲಭಾಯಿ ರಸ್ತೆಯ ಹರೀಶ (26), ಬಿಟ್ಟಗೌಡನಹಳ್ಳಿಯ ರಮೇಶ (35), ಬನವಾಸೆ ಗ್ರಾಮದ ರಮೇಶ (37), ಸಾಲಗಾಮೆ ಗ್ರಾಮದ ಪ್ರದೀಪ (23) ಎಂಬವರೇ ಬಂಧಿತ ಆರೋಪಿಗಳು. ಪಣಕ್ಕಿಟ್ಟಿದ್ದ 8500 ರು. ನಗದನ್ನು ವಶಪಡಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.