ತೇಜಸ್ವಿ 75ನೇ ಜನ್ಮ ದಿನಾಚರಣೆ ನೆನಪಿನ ಸಪ್ತಾಹ
ಕ.ಪ್ರ. ವಾರ್ತೆ ಹಾಸನ ಸೆ.14
ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಆದರ್ಶವನ್ನು ವಿದ್ಯಾರ್ಥ್ಥಿಗಳು ಮೈಗೂಡಿಸಿಕೊಂಡು ಓದುವುದರ ಜತೆಯಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವಂತೆ ವೈದ್ಯಕೀಯ ಮಹಾ ವಿದ್ಯಾಲಯದ ನಿರ್ದೇಶಕ ರಾಚೇಗೌಡ ಹೇಳಿದರು. ನಗರದ ವೈದ್ಯಕೀಯ ಮಹಾ ವಿದ್ಯಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ಣಚಂದ್ರ ತೇಜಸ್ವಿ 75ನೇ ಜನ್ಮ ದಿನಾಚರಣೆ ನೆನಪಿನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು. ನಮ್ಮ ಭಾಷೆ ನುಡಿಯನ್ನು ಎಂದೂ ಮರೆಯಬಾರದು, ನಾಡಿನ ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಜನಾರ್ದನ್ ಎವಿಕೆ ಕಾಲೇಜಿನ ಪ್ರಾಧ್ಯಾಪಕ ಎಚ್.ಎಲ್. ಮಲ್ಲೇಶಗೌಡ, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕ ವಿನೋದ್ಚಂದ್ರ, ಕಸಾಪ ತಾಲೂಕು ಅಧ್ಯಕ್ಷ ಮಮತೇಶ್ ಮತ್ತಿತರರು ಇದ್ದರು. ರಾಘವೇಂದ್ರ ಪ್ರಾರ್ಥಿಸಿದರು, ಶ್ವೇತಾ ಸ್ವಾಗತಿಸಿದರು.
ಕಸಾಪ ಕಾರ್ಯದರ್ಶಿ ಗೊರೂರು ಶಿವೇಶ್ ನಿರೂಪಿಸಿದರು.