ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವೇಗೌಡರನ್ನು ಟೀಕಿಸುವುದೇ ಶಿವರಾಂ ಸಾಧನೆ: ಹನುಮೇಗೌಡ

Mainashree
Updated On : 14 Sept 2013, 10:19 am

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಟೀಕಿಸುವುದೇ ಸಾಧನೆ ಎಂದು ತಿಳಿದುಕೊಂಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಈಗಲಾದರೂ ಉತ್ತಮ ಕೆಲಸಗಳನ್ನು ಮಾಡಿ ಜನರ ಪ್ರೀತಿ, ವಿಶ್ವಾಸ ಗಳಿಸಲಿ ಎಂದು ಹಾಸನ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮೇಗೌಡ ತಿಳಿಸಿದ್ದಾರೆ. ಪ್ರತಿ ಸಂದರ್ಭದಲ್ಲೂ  ಮಾಧ್ಯಮ ಮುಂದೆ ದೇವೇಗೌಡ ಮತ್ತು ರೇವಣ್ಣನವರ ಬಗ್ಗೆ ಸಲ್ಲದ ಆರೋಪ ಮಾಡುತ್ತಿರುವ ಬಿ.ಶಿವರಾಂ ನಿಜವಾದ ಕೆಲಸಗಾರರೇ ಆಗಿದ್ದರೆ, ಕಳೆದ ಚುನಾವಣೆಗಳಲ್ಲಿ ಸೋಲು ಅನುಭವಿಸುತ್ತಿರಲಿಲ್ಲ. ಅವರ ಅದಕ್ಷತೆಯಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿರುವುದು ವರಿಷ್ಠರಿಗೆ ತಿಳಿದಿದೆ. ನಾಯಕತ್ವ ಇಲ್ಲದ ಕಾರಣ ಬಿ.ಶಿವರಾಂ ಅವರನ್ನೇ ಅಧ್ಯಕ್ಷರನ್ನಾಗಿ  ಮುಂದುವರೆಸುವ ಮೂಲಕ  ಹಾಳೂರಿಗೆ ಉಳಿದವನೇ ಗೌಡ ಎಂಬಂತಾಗಿದೆ ಎಂದರು. ದುರುದ್ದೇಶದಿಂದ ಟೀಕೆ ಮಾಡುವುದು ಸಜ್ಜನ ರಾಜಕಾರಣಿ ಲಕ್ಷಣವಲ್ಲ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement