ಬಿಪಿಎಲ್ ಕಾರ್ಡ್ ನೀಡಲು ಹಣ ಪಡೆದರೆ ಕ್ರಮ: ಶಾಸಕ ಬಾಲಕೃಷ್ಣ
ಕ.ಪ್ರ. ವಾರ್ತೆ ನುಗ್ಗೇಹಳ್ಳಿ ಸೆ.14
ಬಡವರಿಗೆ ಬಿಪಿಎಲ್ ಕಾರ್ಡ್ ಕೊಡಿಸಲು ಯಾವುದೇ ಪಂಚಾಯ್ತಿಯಲ್ಲಿ ಅಧಿಕಾರಿಗಳು ಯಾರಾದರೂ ಹೆಚ್ಚು ಹಣ ಪಡೆದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಅವರು ಇಲ್ಲಿಗೆ ಸಮೀಪದ ಅಕ್ಕನಹಳ್ಳಿ ಕೂಡು ಗ್ರಾಮ ಪಂಚಾಯ್ತಿ ಆವರಣದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ 170 ಹೊಸ ಬಿಪಿಎಲ್ ಪಡಿತರ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ತಾಲೂಕಿನ ಸಾತೇನಹಳ್ಳಿಯಲ್ಲಿ ಕಾರ್ಡ್‌ಗೆ 1000 ರು. ಪಡೆದವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು. ತಾಲೂಕಿನಲ್ಲಿ 17000 ಬಿಪಿಎಲ್ ಕಾರ್ಡ್‌ಗೆ ಅರ್ಜಿ ಬಂದಿವೆ. ಇನ್ನು ಬಡವರಿಗೆ 7000 ಸಾವಿರ ಬಿಪಿಎಲ್ ಕಾರ್ಡ್ ಕೊಡಿಸುವ ಭರವಸೆ ನೀಡಿದರು. ಪಂಚಾಯ್ತಿ ಅಧಿಕಾರಿಗಳು ನಿಮ್ಮ ವ್ಯಾಪ್ತಿಯ ಕುಡಿಯುವ ನೀರು ಟ್ಯಾಂಕುಗಳು, ಚರಂಡಿಗಳನ್ನು ಸ್ವಚ್ಛಗೊಳಿಸಿಕೊಂಜು ಡೆಂಘೀ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ನುಗ್ಗೇಹಳ್ಳಿ ನೂತನ ಪೋಲೀಸ್ ಠಾಣೆ ಕಟ್ಟಡಕ್ಕೆ 70 ಲಕ್ಷ ರೂ ಹಣ ಮಂಜುರಾಗಿದೆ ಹಳೆ ಕಟ್ಟಡ ತೆರೆವುಗೊಳಿಸಿದರೆ ವಾಹನ ದಟ್ಟಣೆ ಕಡಿಮೆ ಆಗುತ್ತದೆ ಎಂದರು. ಪಿಡಿಒ ಮಂಜಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳ ಪ್ರಕಾಶ್, ತಾಪಂ ಮಾಜಿ ಉಪಾಧ್ಯಕ್ಷ ಶ್ರೀಧರ್, ತಿಪ್ಪುರು ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಶಂಕರೇಗೌಡ, ವಿಕ್ಟರ್, ಗೋಕುಲಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ನಾರಾಯಣಸ್ವಾಮಿ, ಇಂದ್ರಜಿತ್, ನಾಗರಾಜು ಇದ್ದರು.