ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶ್ರೀಗಂಧ ಸಾಗಣೆ: ನಾಲ್ವರ ಬಂಧನ

Mainashree
Updated On : 14 Sept 2013, 9:17 am

ಸಕಲೇಶಪುರ: ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿ, 7,500 ರು.  ಬೆಲೆಯ ಶ್ರೀಗಂಧ ತುಂಡುಗಳನ್ನು  ಪೊಲೀಸರು ಶುಕ್ರವಾರ ಶ್ರೀನಿವಾಸ್ ಹೋಟೆಲ್ ಮುಂಭಾಗ ವಶಪಡಿಸಿ ಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇಬ್ರಾಹಿಂ (45), ಕಾಸರಗೋಡು ವಿದ್ಯಾನಗರದ ಅಬ್ದುಲ್ ಖಾದರ್ (55), ಬೇಲೂರು ತಾ. ಅರೇಹಳ್ಳಿಯ ಈದ್ಗಾ ರಸ್ತೆಯ ಬಾಬು ಅಲಿಯಾಸ್ ಕುಡುಕ ಬಾಬು (42), ಬಿಕ್ಕೋಡು ಗ್ರಾಮದ ಕುವೆಂಪುನಗರದ ಪುತ್ತು ಅಲಿಯಾಸ್ ಅಬ್ದುಲ್ (34) ಬಂಧಿತ ಆರೋಪಿಗಳು.
 ಶುಕ್ರವಾರ ಮ. 3-30ರಲ್ಲಿ ಸಕಲೇಶಪುರ ಪಟ್ಟಣ, ಬಿ.ಎಂ ರಸ್ತೆ ಶ್ರೀನಿವಾಸ ಹೋಟೆಲ್ ಮುಂಭಾಗ ಆರೋಪಿಗಳು  ಗಂಧದ ತುಂಡುಗಳನ್ನು ಕಳ್ಳತನದಿಂದ ಸಾಗಿಸಲು ಕೈ ಚೀಲದಲ್ಲಿ ಹಿಡಿದುಕೊಂಡಿದ್ದರು. ಈ ಸಂದರ್ಭದಲ್ಲಿ  ಪಿಎಸ್‌ಐ  ಜೀವನ್ ಅವರಿಗೆ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋದಾಗ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು.
ಅವರನ್ನು ಹಿಡಿದು ವಿಚಾರಿಸಿದಾಗ ಶ್ರೀಗಂಧದ ತುಂಡುಗಳನ್ನು  ಬೇರೆ ರಾಜ್ಯದ ಇಬ್ರಾಹಿಂ ಹಾಗೂ ಅಬ್ದುಲ್‌ಖಾದರ್ ಕೊಡಲು ಹೋಗುತ್ತಿದ್ದಾಗಿ ತಿಳಿಸಿದ್ದರ ಮೇರೆಗೆ ಅವರನ್ನು  ಬಂಧಿಸಲಾಗಿದೆ. ಕೈಯಲ್ಲಿದ್ದ 7500 ರು.  ಬೆಲೆಯ 3 ಕೆಜಿ 700 ಗ್ರಾಂ ತೂಕದ  17 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ನಾಲ್ಕು ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement