ಕಳಪೆ ಪೊಟ್ಯಾಷ್ ಗೊಬ್ಬರ ಪತ್ತೆ
ಕ.ಪ್ರ. ವಾರ್ತೆ ಸಕಲೇಶಪುರ ಸೆ. 15
ಜುವಾರಿ ಕಂಪನಿಯ ಪೊಟ್ಯಾಷ್ ಗೊಬ್ಬರ ತುಂಬಾ ಕಳಪೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಯೋಗೇಶ್ ಸ್ಥಳೀಯ ಮಾರುಕಟ್ಟೆಯಲ್ಲಿ ಈ ಗೊಬ್ಬರ ಮಾರಾಟ ಮಾಡದಂತೆ ಆದೇಶ ನೀಡಿದ್ದಾರೆ.
ಹೆಗ್ಗದ್ದೆ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ನಂಜಪ್ಪ ಪಟ್ಟಣದ ಎಪಿಎಂಸಿ ಗೋದಾಮಿನಲ್ಲಿರುವ ಟಾಟಾ ತೋಟದ ಸಾಮಾಗ್ರಿಗಳ ವಿತರಣಾ ವಿಭಾಗದಿಂದ 16 ಚೀಲ ಯೂರಿಯ ಹಾಗೂ 4 ಚೀಲ ಪೊಟ್ಯಾಷ್ ಖರೀದಿಸಿ, ತಮ್ಮ ತೋಟದಲ್ಲಿ ಕಾಫಿ ಗಿಡಗಳಿಗೆ ಗೊಬ್ಬರ ಹಾಕಲು ಸಿದ್ದತೆ ನಡೆಸಿದ ಸಂದರ್ಭದಲ್ಲಿ ಪೊಟ್ಯಾಷ್ ಗೊಬ್ಬರದ ಚೀಲಗಳಲ್ಲಿ ಮಣ್ಣಿನ ಗಡ್ಡೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಯೋಗೇಶ್ಗೆ ದೂರು ನೀಡಿದ್ದರು. ಕೃಷಿ ಅಧಿಕಾರಿಗಳು ಪೊಟ್ಯಾಷ್ ಚೀಲಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲೂ ಇಂಥ ದೋಷಗಳು ಕಂಡು ಬಂದ ಕಾರಣ ಈ ಆದೇಶ ಹೊರಡಿಸಲಾಗಿದೆ.