'ಯುವ ಪೀಳಿಗೆ ಕಲೆ, ಸಾಹಿತ್ಯ ಉಳಿಸಿ ಬೆಳೆಸಬೇಕು'
ಹಾಸನ: ನಗರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ನಾ ಮೆಚ್ಚಿದ ಕೃತಿ ಕುರಿತು ಅಂತರ ಕಾಲೇಜು ವಿಮರ್ಶಾ ಸ್ಪರ್ಧೆ ಹಾಗೂ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮವನ್ನು ಸಾಹಿತಿ ಭಾನು ಮುಷ್ತಾಕ್ ಉದ್ಘಾಟಿಸಿದರು. ಸರ್ಕಾರ ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸಾಕಷ್ಟು ಹಣವನ್ನು ವ್ಯಯ ಮಾಡುತ್ತಿದೆ. ಇಂದಿನ ಪೀಳಿಗೆ ಅದನ್ನು ಅರಿತು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯವನ್ನು ಮಾಡಬೇಕು. ಸಾಹಿತ್ಯ ಮತ್ತು ಕಲೆಯ ಮೂಲ ಅಳಿಸಿ ಹೋಗದಂತೆ ವಿದ್ಯಾರ್ಥಿಗಳು ಎಚ್ಚರವಹಿಸಬೇಕು ಎಂದು ಹೇಳಿದರು. ಜಾನಪದ ಕಲೆ ಮತ್ತು ಸಾಹಿತ್ಯ ತನ್ನ ಮೂಲವನ್ನು ಉಳಿಸಿಕೊಂಡು ಬಂದಿದ್ದು, ಇವರೆಡು ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿದೆ. ಆದ್ದರಿಂದ ಯುವ ಪೀಳಿಗೆಯು ಕಲೆ ಮತ್ತು ಸಾಹಿತ್ಯ ಉಳಿಸಿ ಬೆಳೆಸುವಂತಹ ಕಾರ್ಯ ಮಾಡಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಶಾಂತ್ ಎಸ್.ಭಟ್, ಪ್ರಾಧ್ಯಾಪಕ ಕೆ.ಟಿ.ಕೃಷ್ಣೇಗೌಡ, ಡಾ.ಡಿ.ಶ್ರೀನಿವಾಸ್, ಪ್ರೊ.ಪಿ.ಶಿವಪ್ರಸಾದ್, ಡಾ.ಕೆ.ಜಿ.ಕವಿತಾ ಇತರರು ಇದ್ದರು.