20 ರಂದು ದಂಡಿ ಜಾತ್ರಾ ಉತ್ಸವ
ಚನ್ನರಾಯಪಟ್ಟಣ: ತಾಲೂಕಿನ ಕತ್ತರಿಘಟ್ಟದ ಶ್ರೀನಿವಾಸಮ್ಮನವರ ದಂಡಿ ಜಾತ್ರಾ ಉತ್ಸವ ಸೆ.20 ಹಾಗೂ 21 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಮೆಳಿಯಮ್ಮ ಆಧ್ಯಾತ್ಮ ಕೇಂದ್ರದ ಚಂದ್ರಶೇಖರ ಗುರೂಜಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಖ್ಯಾತ ಕತ್ತರಿಘಟ್ಟದ ದೇವತೆ ಲಕ್ಷ್ಮಿದೇವಿ ಅಥವಾ ಶ್ರೀನಿವಾಸಮ್ಮನವರ ಜಾತ್ರಾ ಮಹೋತ್ಸವದ ಹಿನ್ನೆಲೆಯ ಇತಿಹಾಸ ವಿವರಿಸಿ, ಪೂರ್ವದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮಲೆನಾಡಿನ ತಂಡವೊಂದು ಹೋಗುತ್ತಿದ್ದಾಗ ಕತ್ತಲಾದ ಕಾರಣ ತಂಗಲು ಚಿಂತೆ ನಡೆಸಿ ವಿಹಾರದಲ್ಲಿದ್ದ ಶ್ರೀನಿವಾಸಮ ಇವರನ್ನು ಪ್ರಶ್ನಿಸಿದಳು. ಯಾತ್ರೆಯ ಉದ್ದೇಶ ವಿವರಿಸಿದಾಗ ಮಹಾಮಾತೆ ತಂಗಿ ನಂತರ ಪ್ರವಾಸ ಆರಂಭಿಸಿ, ನಾವು ತಂಗಿದರೆ ಆಹಾರಕ್ಕಾಗಿ ಬಿಲ್ವ ಹೂಡ ಬೇಕಾಗುತ್ತದೆ ಎಂದರು. ಮಹಾದೇವಿ ಅವಕಾಶ ನೀಡಿ ನಾಳೆ ಬೆಳಗ್ಗೆ ತಕ್ಷಣ ಹೊರಡುವಂತೆ ಸೂಚಿಸಿದ ಪದ್ಧತಿಯಂತೆ ದಂಡಿನಜಾತ್ರೆ ಶನಿವಾರ ನಡೆದು ಬಂದಿದ್ದು ಶ್ರೀನಿವಾಸನ ವಾರ ಜಾತ್ರೆ ನಡೆಯುತ್ತಿದೆ ಎಂದು ವಿವರಿಸಿದರು. ಸೆ 20ರಂದು ಕಲ್ಯಾಣೋತ್ಸವ, ಮೂರನೇ ದಿನ ಅಮ್ಮನವರ ಉತ್ಸವ ಗ್ರಾಮದಿಂದ ಹೊರಟು ರಥೋತ್ಸವ ಜರುಗಲಿದೆ. ಮಡಬದ ತೇರಿನ ಉತ್ಸವ, ಹಸಿರುಬಂಡಿ, ಬಾಯಿಬೀಗ, ಸಿಡಿಜಾತ್ರೆ ವೈಭವವಾಗಿ ನಡೆಯಲಿದ್ದು ರಾಜ್ಯದ ಹಲವು ಭಾಗಗಳಿಂದ ಭಕ್ತರು ದೇವರ ದರ್ಶನ ಭಾಗ್ಯ ಪಡೆಯುವರು. 20 ಹಾಗೂ 21ರಂದು ನಡೆಯುವ ಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವಿನಂತಿಸಿದ್ದಾರೆ.