ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಸ್ಪೃಶ್ಯತಾ ಕಾಯ್ದೆ ದುರುಪಯೋಗ ಖಂಡಿಸಿ ಪ್ರತಿಭಟನೆ

Mainashree
Updated On : 16 Sept 2013, 10:13 am

ಕನ್ನಡಪ್ರಭ ವಾರ್ತೆ೤ ಹಳೇಬೀಡು೤ ಸೆ.16
ಅಸ್ಪೃಶ್ಯತಾ ಕಾಯಿದೆ ದುರುಪಯೋಗ ಆಗುತ್ತಿರುವುದನ್ನು ಖಂಡಿಸಿ ಸೋಮವಾರ ಹಳೆಬೀಡಿನಲ್ಲಿ ನಾನಾ ಪಕ್ಷಗಳು ಹಾಗೂ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಇಲ್ಲಿನ ಹೊಯ್ಸಳ ವೃತ್ತದಿಂದ ರಾಜನಸಿರಿಯೂರ್ ರಸ್ತೆವರೆಗೆ ಮೆರವಣಿಗೆ ಸಾಗಿ ನಂತರ ಗ್ರಾಮ ದೇವತೆ ಉಡಿಸಲಮ್ಮ ದೇವಾಲಯ ಮುಂಭಾಗ  ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಹಳೇಬೀಡು ಠಾಣೆ ವ್ಯಾಪ್ತಿಯಲ್ಲಿ ಕೆಲವು ಕಿಡಿಗೇಡಿಗಳು ತಮ್ಮ ವೈಯಕ್ತಿಕ ಮೋಜಿಗಾಗಿ ಗ್ರಾಮಗಳಲ್ಲಿ ಜನತೆಯ ಸಾಮರಸ್ಯ ಕೆಡಿಸಿ ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ತರುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಗಮನ ಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸೂರಾಪುರ ಏತ ನೀರಾವರಿ ಯೋಜನೆ ಮಂಜೂರು ಮಾಡುವ ಮೂಲಕ  ಹಳೇಬೀಡು ಹೋಬಳಿ ಕೆರೆಗಳಿಗೆ ನೀರು ತುಂಬಿಸುವುದು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಹಳೇಸಂತೆ ಬೀದಿಯಲ್ಲಿರುವ ಮದ್ಯದ ಅಂಗಡಿಗಳನ್ನು  ಸ್ಥಳಾಂತರಿಸುವುದು,  ಹಳ್ಳಿಗಳಲ್ಲಿ ಮದ್ಯ ಮಾರಾಟ ಮತ್ತು ಜೂಜಾಟ ನಿಲ್ಲಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.  
ಕಾಂಗ್ರೆಸ್ ಮುಖಂಡ ಎಚ್.ಎಂ.ರಾಜು, ಬಿಜೆಪಿ  ತಾಲೂಕು  ಅಧ್ಯಕ್ಷ ಆನಂದ್, ಹಗರೆ ಭೀಮಯ್ಯ, ಎಚ್.ಎಂ.ಗೋವಿಂದಪ್ಪ, ಹೆಚ್.ಎಂ. ಮಂಜಪ್ಪ, ಹರಬೀಹಳ್ಳಿ ಗುರುಸ್ವಾಮಿ, ಚನ್ನೇಗೌಡ, ಗಂಗಾಧರ,  ಗಡಿಮಲ್ಲಿಕಣ್ಣ, ಗ್ರಾಮ ಪಂಚಾಯ್ತಿ  ಗೋ.ಹಳ್ಳಿ ಅಧ್ಯಕ್ಷೆ ಶಂಕುಂತಳ, ತಾಪಂ ಸದಸ್ಯ ಸೋಮಶೇಖರ್ ಇದ್ದರು. ಗ್ರಾಮದ ಜನತೆ ಸ್ವಯಂ ಪ್ರೇರಿತಅಂಗಡಿ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಸಹಕಾರ ನೀಡಿದರು. ಸಿಪಿಐ ಶ್ರೀಕಾಂತ್, ಪಿಎಸ್‌ಐಮಂಜು ಬಂದೋಬಸ್ತ್ ಕೈಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement