ಗುಂಪು ಘರ್ಷಣೆ: ಮೂವರಿಗೆ ಮಚ್ಚಿನಿಂದ ಹಲ್ಲೆ
ಚನ್ನರಾಯಪಟ್ಟಣ: ತಾಲೂಕಿನ ಭೂವನಹಳ್ಳಿ ಬೋವಿ ಕಾಲೋನಿಯಲ್ಲಿ ಎರಡು ಗುಂಪುಗಳ ಮಧ್ಯೆ ಉಂಟಾದ ಗಲಭೆಯಲ್ಲಿ ಮೂವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಬೆಳಗ್ಗೆ ಗ್ರಾಮದ ತಾಯಮ್ಮ ಮತ್ತು ತಿಮ್ಮಮ್ಮ ಎಂಬುವರ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಪ್ರಾರಂಭವಾಗಿ ಮಧ್ಯಸ್ಥರಿಂದ ಕೊನೆಗೊಂಡಿತು. ಆದರೆ ಸಂಜೆ ಮಕ್ಕಳು ಮನೆಗೆ ಬಂದಾಗ ಗಲಾಟೆ ಬಗ್ಗೆ ತಾಯಮ್ಮ ತಿಳಿಸುತ್ತಿದ್ದಂತೆ ಅವರು ಗ್ರಾಮದಲ್ಲಿ ತನ್ನ ಸಂಬಂಧಿಕರನ್ನು ಕರೆದುಕೊಂಡು ತಿಮ್ಮಮ್ಮನ ಮನೆಗೆ ತೆರಳಿ ಮಗ ಜಯಣ್ಣ ಬಿ.ಆರ್. ಸೊಸೆ ಕವಿತಾ ಹಾಗೂ ಸಂಬಂಧಿ ಜಯಣ್ಣ ಅವರ ಮೇಲೆ ಮಾರಣಾಂತಿಕವಾಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಜಯಣ್ಣ ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ ರಮೇಶ್, ಮಂಜಾಬೋವಿ ಹಾಗೂ ಮಂಜ ವಿರುದ್ಧ ನುಗ್ಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.