ನೇಕಾರರಿಗೆ ಮನೆ ಯೋಜನೆ ಬಿಜೆಪಿ ಸರ್ಕಾರ ಹೊಂದಿತ್ತು: ಎಂಡಿಎನ್
ಚನ್ನರಾಯಪಟ್ಟಣ: ನೇಕಾರರಿಗೆ ಮನೆಗಳನ್ನು ನಿರ್ಮಿಸಿಕೊಡುವ ಹಾಗೂ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಧನ ಸಹಾಯ ಇತ್ಯಾದಿ ಯೋಜನೆಗಳು ತಾವು ರಾಜ್ಯ ಕೈಮಗ್ಗ ನಿಗಮ ಅಧ್ಯಕ್ಷರಾಗಿದ್ದಾಗ ಮಾಜಿ ಮುಖ್ಯಮಂತ್ರಿ ಯಡಿಯೂಪ್ಪ ಸರ್ಕಾರದಿಂದ ರಾಜ್ಯದಲ್ಲಿ ಕಾರ್ಯಾಚರಣೆಯಾಗಿತ್ತು ಎಂದು ರಾಜ್ಯ ನೇಕಾರ ಸಮುದಾಯ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್ ತಿಳಿಸಿದರು.
ಅವರು ಭಾನುವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚನ್ನರಾಯಪಟ್ಟಣದಲ್ಲಿ ಸುಮಾರು 200 ನೇಕಾರರಿಗೆ ಮನೆಗಳನ್ನು ನೀಡಲು ಅಂದಿನ ಶಾಸಕರೊಂದಿಗೆ ಮಾತನಾಡಲಾಗಿತ್ತು, ಏಕೋ ಗಮನಹರಿಸಲಿಲ್ಲ ಎಂದರು. ರಾಜ್ಯದಲ್ಲಿ ಸುಮಾರು 65 ಲಕ್ಷ ರು.ಗೂ ಅಧಿಕ ಜನ ಸಂಖ್ಯೆ ಹೊಂದಿರುವ ಸಮಾಜ ಮುಂದಿನ ದಿನಗಳಲ್ಲಿ ಸಂಘಟನೆಯಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಬೆಳೆಯಬೇಕೆಂದು ಕರೆನೀಡಿದರು. ತಾಲೂಕು ಅಧ್ಯಕ್ಷ ಪುಟ್ಟಣ್ಣ, ಬಾಗೂರು ಸಂಘದ ಕಾರ್ಯದರ್ಶಿ ಟೈಲರ್ ಕೃಷ್ಣಪ್ಪ, ದಮ್ಮನಿಂಗಲರವಿ, ಗಿರೀಶ್, ಶಿವಣ್ಣ, ಪ್ರಸಾದ್, ತೀರ್ಥಪ್ರಸಾದ್, ಕೃಷ್ಣಪ್ಪ, ಸುದೀಪ್, ನಾಗೇಶ್, ವೆಂಕಟೇಶ್, ಲವ, ಕುಶ, ವೇಣು, ನವೀನ್, ಶರತ್, ಚೇತನ್, ಸಿದ್ದರಾಜು ಇದ್ದರು.