ಸೀಮೆಎಣ್ಣೆ ಟ್ಯಾಂಕರ್ ಲಾರಿ ಪಲ್ಟಿ
ಆಲೂರು: ಮಂಗಳೂರಿನಿಂದ ಅರಸೀಕೆರೆಗೆ ಸೀಮೆಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಎದುರಿನಿಂದ ಬಂದ ವಾಹನ ತಪ್ಪಿಸಲು ಹೋದ ಪರಿಣಾಮ ಪಲ್ಟಿಯಾದ ಘಟನೆ ತಾಲೂಕಿನ ಪಾಳ್ಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ಸಂಜೆ 7ರಲ್ಲಿ ನಡೆದಿದೆ.
ಟ್ಯಾಂಕರ್ ಎದುರಿನಿಂದ ಬಂದ ವಾಹನ ತಪ್ಪಿಸಲು ಹೋಗಿ ಪಲ್ಟಿಯಾದ ಟ್ಯಾಂಕರ್‌ನಿಂದ ಸೀಮೆಎಣ್ಣೆ ಸೋರಿಕೆಯಾಗಿದ್ದು, ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಸಂಭವಿಸುತ್ತಿದ್ದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಸ್ಥಳದ ಸಮೀಪದಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದು, ಅನಿಲ ಸೋರಿಕೆಯಾದ ಪರಿಣಾಮ 2 ದಿನ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪದೇ ಪದೇ ಈ ಸ್ಥಳಗಳಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.