ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಳೆನರಸೀಪುರದಲ್ಲೂ ಮಾದಿಗ ದಂಡೋರ ಪ್ರತಿಭಟನೆ

Mainashree
Updated On : 16 Sept 2013, 9:35 am

ಹೊಳೆನರಸೀಪುರ: ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟ ಜಾತಿಗಳಿಗೆ ಒಳಮೀಸಲಾತಿ ವರ್ಗೀಕರಣ ಕೇಳುತ್ತಲೆ ಬಂದಿರುವ ಪರಿಶಿಷ್ಟ ಜಾತಿಗೆ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ತಾಲೂಕು ಮಾದಿಗ ದಂಡೋರ ಸಮಿತಿ ಮೆರವಣಿಗೆ ಪ್ರತಿಭಟನೆ ನಡೆಸಿತು.
ತಾಲೂಕು ಸಮಿತಿ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿದ ಅವರು ಇದರಿಂದ ನೆನಗುದಿಗೆ ಬಿದ್ದಿರುವ ಹತ್ತು ಸಾವಿರದಷ್ಟು ಮಂದಿ ಡಿ ಗ್ರೂಪ್ ಗ್ರಾಮ ಸಹಾಯಕರನ್ನು ಸರ್ಕಾರಿ ನೌಕರರೆಂದು ಪರಿಗಣಸುವಂತೆ ಅಗ್ರಹ ಪಡಿಸಿದರು.
ರಾಜ್ಯದ ಪಟ್ಟಣಗಳಲ್ಲಿನ ಪುರಸಭೆಗೆ ಗುತ್ತಿಗೆ ಪದ್ಧತಿಯಲ್ಲಿ ನೇಮಕ ಮಾಡಿಕೊಳ್ಳುವ ಪೌರಕಾರ್ಮಿಕರ ಗುತ್ತಿಗೆಯನ್ನು ರದ್ದು ಪಡಿಸಿ ಅವರುಗಳನ್ನು ಪುರಸಭೆಯ ಕಾರ್ಮಿಕರನ್ನಾಗಿ ಕಾಯಂಗೊಳಿಸಬೇಕು, ದಿನಗೂಲಿ, ಸಫಾಯಿ ಕರ್ಮಚಾರಿ ಸಿಬ್ಬಂದಿಗಳನ್ನು ಕಾಯಂಗೊಳಿಸಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಸದಾಶಿವ ವರದಿ ಪ್ರಕಾರ ಭರ್ತಿ ಮಾಡಬೇಕೆಂದು ಆಗ್ರಹಪಡಿಸಿದರು. ಪ್ರಧಾನಕಾರ್ಯದರ್ಶಿ ರಾಮದಾಸು, ಉಪಾಧ್ಯಕ್ಷ ಉಮೇಶ್, ಸಂಘಟನಾ ಕಾರ್ಯದರ್ಶಿ ಸತೀಶ್, ರಘುರಾಂ, ಎಚ್.ಎಸ್.ಸ್ವಾಮಿ, ಸಿದ್ದಯ್ಯ , ಮಂಜುನಾಥ ಸೇರಿದಂತೆ ಮಾದಿಗ ದಂಡೋರ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement