ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

Mainashree
Updated On : 17 Sept 2013, 10:18 am

ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ಸಂತೆಮರೂರು ಗ್ರಾಮದ ಕೆಲ ಅಂಗಡಿಗಳಲ್ಲಿ ಪರವಾನಗಿ ಇಲ್ಲದೇ ಮದ್ಯದ ಮಾರಾಟ ನಡೆಯುತ್ತಿದ್ದು, ಅಕ್ರಮ ಮಾರಾಟಗಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮಾರಾಟ ತಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ  ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
       ಸಂತೆಮರೂರು ಗ್ರಾಮದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದುಶೇಕಡಾ 60ರಷ್ಟು ಜನ ಪರಿಶಿಷ್ಟರು ಇದ್ದಾರೆ.  ಗ್ರಾಮದಲ್ಲಿ ಮದ್ಯದ ಚಟಕ್ಕೆ ಯುವಕರು ಬಿದ್ದಿದ್ದು ಇದರಿಂದ ಕುಟುಂಬಗಳ ನೆಮ್ಮದಿ ಹಾಳಾಗುತ್ತಿದ್ದು,ಜನರ ನೆಮ್ಮಧಿಗೆ ಧಕ್ಕೆ ಉಂಟಾಗುತ್ತಿದೆ.ಆದ್ದರಿಂದ ಕೂಡಲೇ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.ಈ ಸಂಬಂಧ ಹಲವು ಬಾರಿ ಸಾರ್ವಜನಿಕ ಪ್ರತಿಭಟನೆ ಮತ್ತು ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ಕರವೇ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾದೀತು ಎಂದು ಎಚ್ಚರಿಸಿದೆ.
    ಪ್ರತಿಭಟನೆ ವೇಳೆ ಹಾಸನದ ಅಬಕಾರಿ ಇನ್ಸ್‌ಪೆಕ್ಟರ್ ಚಂದ್ರೇಗೌಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ,ಅಕ್ರಮ ಮದ್ಯ ಮಾರಾಟದ ವಿರುದ್ದ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಇತ್ತರು.ಪ್ರತಿಭಟನೆಯ ನೇತೃತ್ವ ತಾ.ಕರವೇ ಅಧ್ಯಕ್ಷ ಭಾಸ್ಕರ್, ಘಟಕದ ಅಧ್ಯಕ್ಷ ಯೋಗೇಶ್,ಅರುಣೇಶ್, ಎಂ.ಆರ್.ಹರೀಶ್ ಎಂ.ಎಸ್. ಚಂದ್ರಶೇಖರ್ ಎಂ.ಎ.ನವೀನ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement