ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಈರ್ಷೆ ಬದಿಗಿಟ್ಟು ಒಗ್ಗೂಡಿದರೆ ಸಂಘಟನೆ ಸಾಧ್ಯ: ಬಿಇಒ

Mainashree
Updated On : 17 Sept 2013, 9:42 am

ಹೊಳೆನರಸೀಪುರ: ವೈಯಕ್ತಿಕ ಈರ್ಷೆಗಳನ್ನು ಬದಿಗಿಟ್ಟು ಒಮ್ಮತದಿಂದ ಸಂಘಟಿತರಾದಾಗ ಮಾತ್ರ ಸಮುದಾಯದ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ಹೇಳಿದರು.
ಪಟ್ಟಣದ ಶಂಕರಮಠ ಸಭಾಂಗಣದಲ್ಲಿ ತಾಲೂಕು ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘವು ಹಮ್ಮಿಕೊಂಡಿದ್ದ 2003ರಿಂದ-2013ರವರೆಗಿನ ಸಂಘದ ಲೆಕ್ಕ ಪತ್ರ ವಿವರ, 2012-13ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿನ ದುರ್ಬಲರನ್ನು ಗುರುತಿಸಿ ಅವರನ್ನೂ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾದಾಗ ಮಾತ್ರವೇ ಸಮುದಾಯದಲ್ಲಿ ಸಮಾನತೆ ಮೂಡಿ ಸಮಾಜದ ಏಳಿಗೆ ಸಾಧ್ಯವಾಗುತ್ತದೆ. ಕುವೆಂಪು  ವಾಣಿಯಂತೆ ಎಲ್ಲರೂ ವಿಶ್ವಮಾನವತಾವಾದ ಮೈಗೂಡಿಸಿಕೊಂಡಾಗ ಎಲ್ಲರೂ ನಮ್ಮವರೆಂಬ ಭಾವನೆ ಮೂಡುತ್ತದೆ ಎಂದರು.
ಸಂಘದ ಗೌರವಾಧ್ಯಕ್ಷ ನಿವೃತ್ತ ಉಪ ತಹಸೀಲ್ದಾರ್ ರಾಮಕೃಷ್ಣೇಗೌಡ ಸಮಾನತೆಯನ್ನು ಮೈಗೂಡಿಕೊಂಡು ಅದರೊಟ್ಟಿಗೆ ನಮ್ಮ ಸಮುದಾಯದ ಒಗ್ಗಟ್ಟಿಗೂ ಎಲ್ಲರೂ ಮುಕ್ತವಾಗಿ ಒಗ್ಗೂಡುವಂತೆ ಕರೆ ನೀಡಿದರು.
ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದೇವರಾಜೇಗೌಡ ಮಾತನಾಡಿ, ಯಾವುದೇ ಧರ್ಮವನ್ನು ದ್ವೇಷಿಸದೆ, ಪ್ರೀತಿಯಿಂದ ಸಂಘಟಿಸುವತ್ತಲೂ ಸಮುದಾಯದ ಎಲ್ಲಾ ಬಾಂಧವರೂ ಒಗ್ಗೂಡುವಂತೆ ಕೋರಿದರು.
ವಲಯ ಅರಣ್ಯಾಧಿಕಾರಿ ಪಿ.ಸಿ.ರವೀಂದ್ರ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಪಿ.ಸಿ.ರವೀಂದ್ರ, ತೋಟಗಾರಿಕೆ ಇಲಾಖೆ ಅಧಿಕಾರಿ ದೇವರಾಜೇಗೌಡ, ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ, ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ತಾ. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ, ತಾ. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಸಂಘದ ಅಧ್ಯಕ್ಷ ಹುಚ್ಚೇಗೌಡ, ಉಪಾಧ್ಯಕ್ಷ ಕೆ.ಎ.ರಾಜೇಗೌಡ, ಬೂದನೂರು ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷರಾಗಿದ್ದ ದಿ.ಎಚ್.ಕೆ.ದ್ಯಾವಪ್ಪ ಅವರಿಗೆ ಮರಣೋತ್ತರವಾಗಿ ಗೌರವ ಸಲ್ಲಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹುಚ್ಚೇಗೌಡ ಮಾತನಾಡಿ, ನೊಂದವರು, ಅಶಕ್ತರ ನೆರವಿಗೆ ಸಂಘಟನೆಯು ಯಾವುದೇ ಹಿಂಜರಿಕೆಯಿಲ್ಲದೇ ಸಹಾಯಹಸ್ತ ಚಾಚಲಿದೆ ಎಂದರು. ಧರ್ಮರಾಜ್ ನಿರೂಪಿಸಿದರು. ನೂತನ ಕಾರ್ಯದರ್ಶಿಯಾಗಿ ಸೋಮಶೇಖರ್ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷ ಕಾಳೇಗೌಡ, ಖಜಾಂಚಿ ಗಿಡ್ಡೇಗೌಡ, ಶಿಕ್ಷಕ ಶೇಖರ್, ರವಿಕುಮಾರ್, ದಿವಾಕರ್, ರಾಮೇಗೌಡ, ನಾಗರಾಜ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement