ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಶಸ್ವಿನಿ ಯೋಜನೆಯಡಿ ನೋಂದಣಿಗೆ ಸೂಚನೆ

Mainashree
Updated On : 17 Sept 2013, 9:41 am

ಹಾಸನ: ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆ 2003 ನೇ ಜೂನ್ 1 ರಿಂದ ಪ್ರಾರಂಭವಾಗಿ 11 ನೇ ವರ್ಷಕ್ಕೆ ಕಾಲಿಟ್ಟಿದೆ.  ಗ್ರಾಮೀಣ ಸಹಕಾರಿ ರೈತ ಸದಸ್ಯರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ ಸಾಧನೆಯನ್ನು ಮಾಡಿ ಎಲ್ಲರ ಗಮನ ಸೆಳೆದಿದೆ.  ಈ ಯೋಜನೆಯಡಿ 2013-14 ನೇ ಸಾಲಿನಲ್ಲಿ ಸದಸ್ಯರ ನೋಂದಣಿ ಕಳೆದ ಜುಲೈ 15 ರಿಂದ ಪ್ರಾರಂಭಗೊಂಡಿದ್ದು, ಅ.15ಕ್ಕೆ ಕೊನೆಗೊಳ್ಳಲಿದೆ.
ಸರ್ಕಾರ ಆದೇಶ ಹೊರಡಿಸಿ 2013-14 ನೇ ಸಾಲಿಗೆ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರ ವಾರ್ಷಿಕ ವಂತಿಗೆ 200 ರು.ಗಳನ್ನು ಸರ್ಕಾರವೇ ಭರಿಸುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ವಿವಿಧ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು ಕೂಡಲೇ ಯಶಸ್ವಿನಿ ಯೋಜನೆಯಡಿ ನೊಂದಣಿ ಮಾಡಿಸಲು ಸಂಬಂಧಿಸಿದ ಸಹಕಾರ ಸಂಘದ ಕಾರ್ಯದರ್ಶಿಯನ್ನು ಭೇಟಿ ಮಾಡಲು ಸೂಚಿಸಲಾಗಿದೆ. ಈ ಯೋಜನೆಯಡಿ ಸದಸ್ಯರಾಗಿ ನೊಂದಣಿಯಾಗಲು  ಅ.15  ಕೊನೆಯ ದಿನಾಂಕವಾಗಿದ್ದು ಸಹಕಾರ ಸಂಘಗಳ ಎಲ್ಲಾ ಅರ್ಹ ಸದಸ್ಯರು  ಈ ಯೋಜನೆಯಡಿ ನಿಗದಿತ ಅವಧಿಯೊಳಗೆ ನೊಂದಾಯಿಸಿಕೊಳ್ಳುವಂತೆ ಹಾಸನ ಸಹಕಾರ ಸಂಘಗಳ ಉಪ ನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement