ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲಾರಿ ಮಾಲೀಕನ ಲಕ್ಷಾಂತರ ರು. ಲಪಟಾಯಿಸಿ ಕ್ಲೀನರ್ ಪರಾರಿ

Mainashree
Updated On : 17 Sept 2013, 9:44 am

ಹೊಳೆನರಸೀಪುರ: ಪಟ್ಟಣದ ಲಾರಿ ಮಾಲೀಕರೊಬ್ಬರ ಲಕ್ಷಾಂತರ ರು.ಗಳನ್ನು ಪಟಾಯಿಸಿ ಲಾರಿ ಕ್ಲೀನರ್ ಪರಾರಿ ಆಗಿರುವ ಘಟನೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಸಿದ್ದೇಶ್ವರ ರೈಸ್‌ಮಿಲ್ ಮಾಲೀಕ ಸದಾಶಿವಯ್ಯ ಅವರು ಮೈಸೂರಿನ ಬಂಡಿಪಾಳ್ಯದ ಎಪಿಎಂಸಿ ಯಾರ್ಡ್‌ಗೆ ಅಕ್ಕಿಯನ್ನು ಸರಬರಾಜು ಮಾಡುವುದು ವಾಡಿಕೆ. ಅದರಂತೆ  ಸೆ.7 ರಂದು ಬೆಳಗ್ಗೆ ಲಾರಿಯಲ್ಲಿ ಅಕ್ಕಿಯನ್ನು ತುಂಬಿ ಚಾಲಕ ಲೋಕೇಶ್ ಹಾಗೂ ಕ್ಲೀನರ್ ಇಮ್ರಾನ್ ಜೊತೆಗೂಡಿ ತೆರಳಿ ಅಕ್ಕಿ ಮೂಟೆಗಳನ್ನು ಅಂಗಡಿಗೆ ಇಳಿಸಿದ್ದಾರೆ.
ಅಂಗಡಿ ಮಾಲೀಕ ನೀಡಿದ 2 ಲಕ್ಷ 1 ಸಾವಿರ ರು. ಹಾಗೂ ಜತೆಯಲ್ಲಿದ್ದ 37 ಸಾವಿರದ ಚೆಕ್‌ಗಳನ್ನು ಯಾವಾಗಲೂ ನೀಡುತ್ತಿದ್ದಂತೆ ಚಾಲಕ ಲೋಕೇಶಗೆ ಕೊಟ್ಟಿದ್ದಾರೆ. ಮಾಮೂಲಿನಂತೆ ಆ ಹಣವನ್ನು ಲಾರಿಯಲ್ಲಿನ ಡ್ಯಾಷ್‌ಬಾಕ್ಸ್‌ನಲ್ಲಿ (ದಾಖಲೆ ಪತ್ರಗಳು ವಗೈರೆ ಇಡುವಂಥದ್ದು) ಇಟ್ಟು ಬೀಗ ಹಾಕಿ ಬಾಕಿ ಇರುವ ಹಣವನ್ನು ವಸೂಲಿ ಮಾಡಿಕೊಂಡು ಬರುವುದಾಗಿ ಹೇಳಿ ಲಾರಿ ಬಳಿಯೇ ಇರುವಂತೆ ಕ್ಲೀನರ್ ಇಮ್ರಾನ್‌ಗೆ ತಿಳಿಸಿ ಚಾಲಕ ಹೊರಹೋಗಿದ್ದಾನೆ. ಸ್ಪಲ್ಪ ಸಮಯದ ನಂತರ ಚಾಲಕ ಲೋಕೇಶ್ ಲಾರಿ ಬಳಿ ಬಂದು ನೋಡಿದರೆ ಕ್ಲೀನರ್ ಇಮ್ರಾನ್ ಇರಲಿಲ್ಲ. ಈಗ ಬರಬಹುದೆಂದು ಕಾದು ನೋಡಿದ್ದಾನೆ.
ಆದರೆ ಇಮ್ರಾನ್ ಸಂಜೆಯಾದರೂ ಬರಲಿಲ್ಲ. ಇನ್ನೇನು ಮಾಡುವುದೆಂದು ಚಾಲಕ ಲೋಕೇಶ್ ಹೊರಡಲು ಸಿದ್ಧವಾಗಿ ಲಾರಿ ಹತ್ತಿದ್ದಾರೆ. ಆಗ ಆತನ ಕಣ್ಣಿಗೆ ಬಿದ್ದಿದ್ದು ಕ್ರಾಷ್ ಹಾಕ್ಸ್ ಓಪನ್ ಅಗಿದ್ದುದು. ಇದನ್ನು ಕಂಡು ಹೌಹಾರಿ ಬಾಕ್ಸ್‌ನಲ್ಲಿ ತಾನಿಟ್ಟಿದ್ದ ಹಣಕ್ಕಾಗಿ ತಡಕಾಡಿದ್ದಾನೆ. ಹಣ ಇಲ್ಲದನ್ನು ಕಂಡು ಗಾಬರಿಯಿಂದ ವಿಷಯವನ್ನು ಮಾಲೀಕ ಸದಾಶಿವಯ್ಯ ಮತ್ತು ಅಭಿನಂದನ್‌ಗೆ ತಿಳಿಸಿದ್ದಾನೆ.
ಹಣದೊಂದಿಗೆ ಪರಾರಿ ಆಗಿದ್ದ ಕ್ಲೀನರ್ ಎಷ್ಟು ಸಮಯವಾದರೂ ಬರಲೇ ಇಲ್ಲ. ಆಗ ವಿಧಿಯಿಲ್ಲದೆ ಸಮೀಪದ ಠಾಣೆಯಲ್ಲಿ ರಾತ್ರಿ 11 ಗಂಟೆಗೆ ಕ್ಲೀನರ್ ಇಮ್ರಾನ್ ಹಣ ಮತ್ತು ಚೆಕ್‌ನೊಂದಿಗೆ ಪರಾರಿ ಆಗಿರುವ ಬಗ್ಗೆ ದೂರು ದಾಖಲು ಮಾಡ ಬೇಕಾಯಿತೆಂದು ಚಾಲಕ ಲೋಕೇಶ್ ಹೇಳಿದ್ದಾನೆ.
ಈ ಘಟನೆ ನಡೆದ ಒಂದೆರೆಡು ದಿನಗಳ ನಂತರ ಕ್ಲೀನರ್ ಇಮ್ರಾನ್‌ನ ಚಟುವಟಿಕೆಗಳ ಬಗ್ಗೆ ಒಂದೊಂದೇ ಮಾಹಿತಿ ಬಹಿರಂಗವಾಗ ತೊಡಗಿದೆ.  ಆ ಪ್ರಕಾರ ಇಮ್ರಾನ್ ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿಯೂ ಇದೇ ರೀತಿ ಹಣ ಲಪಟಾಯಿಸಿದ್ದನೆಂಬ ಅಂಶ ರೈಸ್‌ಮಿಲ್ ಮಾಲೀಕ ಸದಾಶಿವಯ್ಯ ಮತ್ತು ಅಭಿನಂದನ್‌ಗೆ ದೊರೆತಿದೆ. ಲಾರಿ ಕ್ಲೀನರ್ ಇಮ್ರಾನ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement