ವಿವೇಕಾನಂದ ಸ್ಕೌಟ್ಸ್ ಟ್ರೂಫ್ ಉದ್ಘಾಟನೆ
ಅರಸೀಕೆರೆ: ಮಕ್ಕಳ ಸರ್ವಾಂಗೀಣ ವಿಕಾಸ, ಬೆಳವಣಿಗೆಗೆ ಹಾಗೂ ಸೇವಾ ಮನೋಭಾವನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸ್ಕೌಟ್ಸ್ - ಗೈಡ್ಸ್ ಪೂರಕವಾಗಿದೆ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್‌ನ ಸ್ಥಳೀಯ ಸಂಸ್ಥೆ ಅಧ್ಯಕ್ಷರೂ ಆದ ಬಿಇಓ ಎಸ್.ಪಿ.ನಟರಾಜ್ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಬಾಲಕರ ವಿವೇಕಾನಂದ ಸ್ಕೌಟ್ ಟ್ರೂಫ್ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಆತಂಕ, ವಿಪತ್ತು ಎದುರಿಸುವ ಸಂದರ್ಭಗಳಲ್ಲಿ ಇಂತಹ ಸಂಸ್ಥೆಗಳಿಂದ ತರಬೇತಿ ಪಡೆದ ಯುವಕ ಯುವತಿಯರಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಬಹುದು. ಅದರೊಟ್ಟಿಗೆ ತಾವು ಕೂಡಾ ಎಲ್ಲ ರೀತಿಯ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ತರಬೇತಿದಾರನೂ ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಸಂಸ್ಥೆ ಕಾರ್ಯದರ್ಶಿ ಲೀಲಾಮಹೇಶ್ವರ್ ಸ್ಕೌಟ್ಸ್ - ಗೈಡ್ಸ್ ಬೆಳೆದು ಬಂದ ಬಗೆ ತಿಳಿಸಿದರು. ಗೋವಿಂದರಾಜ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಾಜಿ ಅಧ್ಯಕ್ಷ ಯೋಗೀಶಚಾರ್, ರೋಟರಿ ಶಾಲೆಯ ಆಡಳಿತಾಧಿಕಾರಿ ನಾರಾಯಣಶರ್ಮಾ, ಅರುಣಕುಮಾರ್ ಇದ್ದರು.