ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 17 Sept 2013, 9:42 am

ನಗರದಲ್ಲಿ ಅದ್ಧೂರಿ ಗಣಪತಿ ಉತ್ಸವ
ಹಾಸನ: ಇಲ್ಲಿನ ಪಾಂಚಜನ್ಯ ಸಂಘ ಪರಿವಾರದವರು ಪ್ರತಿಷ್ಠಾಪಿಸಿದ್ದ ಐದು ದಿನಗಳ ಗಣಪತಿ ಮಹೋತ್ಸವ   ಅದ್ಧೂರಿಯಾಗಿ ನಡೆಯಿತು. ನಗರದ ಬಾಹೇರ್‌ಪೇಟೆಯಿಂದ ತೆರಳಿದ ಮೆರವಣಿಗೆಯಲ್ಲಿ ಭುವನೇಶ್ವರಿ, ಭಗತ್‌ಸಿಂಗ್, ವಿವೇಕಾನಂದ, ಬಾಲಗಂಗಾಧರ ತಿಲಕ್ ಇತರೆ ಹೋರಾಟಗಾರರ ಭಾವಚಿತ್ರ
ಹಾಗೂ ಕಾಮಧೇನು ಪ್ರತಿಮೆ ಸೇರಿದಂತೆ ಇತರೆ ಕಲಾ ತಂಡಗಳು ಭಾಗವಹಿಸಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಇದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಸಾಗಿತು.

ಜಿಲ್ಲಾ ಜಾಗೃತಿ, ಉಸ್ತುವಾರಿ ಸಮಿತಿ ಸಭೆ ನಾಳೆ
ಹಾಸನ: ಮಾಜಿ ಪ್ರಧಾನಿ, ಸಂಸದ ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ಎಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಸೆ.19ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ 2013-14ನೇ ಸಾಲಿನ ಕೇಂದ್ರ ವಿವಿಧ ಪುರಸ್ಕಾರ ಯೋಜನೆಯ ಎರಡನೆ ತ್ರೈಮಾಸಿಕ ಪ್ರಗತಿಯನ್ನು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪರಿಶೀಲನೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ವಳಂಬಿ ಗ್ರಾಮದ ಮಹಿಳೆ ನಾಪತ್ತೆ
ಹೊಳೆನರಸೀಪುರ: ತಾಲೂಕಿನ ವಳಂಬಿ ಗ್ರಾಮದಲ್ಲಿ ದೊಡ್ಡಮ್ಮ (65) ಎಂಬುವರು ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆ ಕೆಂಪು ಬಣ್ಣ, ಕೆಂಪುಬಣ್ಣದ ಹೂವಿನ ಸೀರೆ ಧರಿಸಿದ್ದು ಕನ್ನಡ ಮಾತನಾಡುತ್ತಾರೆ.  ಈಕೆಯ ಬಗ್ಗೆ  ಸುಳಿವು ದೊರೆತರೆ  ಆರಕ್ಷಕ ಅಧೀಕ್ಷಕರು, ಹಾಸನ 08172-268410, ಜಿಲ್ಲಾ ನಿಸ್ತಂತು ವಿಭಾಗ ಹಾಸನ 08172-268845, ಹೊಳೆನರಸೀಪುರ ಗ್ರಾಮಾಂತರ ಠಾಣೆ 08175-273308 ಸಂಪರ್ಕಿಸಬಹುದು ಎಂದು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.

ಪೇದೆಗೆ ಕಡ್ಡಾಯ ರಜೆಗೆ ಆದೇಶ
ಸಕಲೇಶಪುರ: ಮಾಜಿ ಸಚಿವ ಬಿ.ಡಿ ಬಸವರಾಜ್ ಅವರೊಂದಿಗೆ ಅನುಚಿತವಾಗಿ ಮಾತನಾಡಿದ ಆರೋಪದಡಿ ಗ್ರಾಮಾಂತರ ಠಾಣೆ ಪೇದೆ ರಾಜಣ್ಣ ಎಂಬುವರನ್ನು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಆದೇಶ ಹೊರಡಿಸಿದ್ದಾರೆ.
    ತನ್ನೊಂದಿಗೆ ಅನುಚಿತವಾಗಿ ಮಾತನಾಡಿದ ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇತ್ತೀಚಿಗೆ ಮಾಜಿ ಸಚಿವ ಬಸವರಾಜ್ ಪಟ್ಟಣ ಠಾಣೆ ಮುಂಭಾಗ ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಧರಣಿ ವಾಪಸ್ ಪಡೆಯುವಂತೆ ದೂರವಾಣಿ ಮೂಲಕ ಮನವಿ ಮಾಡಿದ್ದ ಜಿಲ್ಲಾ ಎಸ್ಪಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement