ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 17 Sept 2013, 10:19 am

ಅನಂತಮೂರ್ತಿ ಹೇಳಿಕೆ ಖಂಡನೀಯ
ಹಾಸನ: ನರೇಂದ್ರ ಮೋದಿ ಅವರು ಪ್ರಧಾನಿಮಂತ್ರಿ ಆಗುವುದಾದರೇ ನಾನು ಬದುಕಿರುವುದಿಲ್ಲ ಎಂದು ಸಾಹಿತಿ ಯು.ಆರ್.ಅನಂತ ಮೂರ್ತಿ ಹೇಳಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
 ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಮೋದಿ ಅವರು ಪ್ರಧಾನಿ ಅದರೆ ದೇಶ ಬಿಡ್ತಿನಿ ಅಂತಿದ್ದಾರೆ. ನಿಮ್ಮ ಕನಸಿನ ನೆಹರು ಕಂಡಂತ ಭಾರತದಲ್ಲಿ ಕಾಂಗ್ರೆಸ್‌ನವರು ಕಳೆದ 10 ವರ್ಷಗಳಲ್ಲಿ ಮಾಡಿರುವಂತಹ ಕೆಲಸವಾದರೂ ಏನು ಎಂದು ಪ್ರಶ್ನಿಸಿದ ಅವರು, ಸೂಟು ಬೂಟು ಹಾಕಿಕೊಂಡು ಐಶಾರಾಮಿ ಜೀವನ ನಡೆಸುವಂತಹ ತಮ್ಮಂತವರಿಗೆ ಬಡವರ, ಮಧ್ಯಮ ವರ್ಗದವರ ಬವಣೆಗಳ ಬಗ್ಗೆ ಕಾಳಿಜಿ ಇಲ್ಲ ಎಂದು ಕಿಡಿಕಾರಿದರು.
  ಮೋದಿಯವರು ದೂರದೃಷ್ಟಿಯ ಶ್ರಮದಿಂದ ವಿಶ್ವದಲ್ಲಿ ಗುಜರಾತ್‌ಗೆ ಸ್ಥಾನ ನೀಡಲು ಪ್ರಯತ್ನ ಪಟ್ಟು ಸಾಧಿಸಿತೋರಿಸಿದ್ದು, 24 ತಾಸುಗಳ ವಿದ್ಯುತ್, ಕೃಷಿಗೆ ನೀರು, ಯುವರಿಗೆ ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡಿದ್ದಾರೆ. ಉದ್ಯಮಗಳು ಸ್ಥಾಪನೆಯಾಗುತ್ತಿವೆ. ಕೃಷಿ ಹೈನುಗಾರಿಕೆ, ಶೈಕ್ಷಣಿಕ, ಮಹಿಳೆಯರ ಸಬಲೀಕರಣದಲ್ಲಿ ಅತ್ಯಂತ ಯಶಸ್ವಿ ಪಾತ್ರವಹಿಸಿದ್ದಾರೆ ಎಂದರು.
 ಆದರೆ ಕಾಂಗ್ರೆಸ್ ಸರ್ಕಾರ  ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿ ಯಾವ ಕೆಲಸಗಳನ್ನು ಮಾಡಿದೆ. ಬರೀ ಭ್ರಷ್ಟಾಚಾರ, ಲಕ್ಷಾಂತರ ಕೋಟಿ ರು.ಗಳ ಹಗರಣಗಳು, ಸಾಮಾನ್ಯ ಜನರ ತೆರಿಗೆ ಹಣ ಲೂಟಿ ಮಾಡಿದ್ದಾರೆ.  
 ನಗರ ಕಾರ್ಯದರ್ಶಿ ವೇಣು ಮಾತನಾಡಿ, ಸಾಹಿತಿಗಳು ಈ ರೀತಿ ಹೇಳಿಕೆ ನೀಡುವ ಮೂಲಕ ಪ್ರಚಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಗಣಪತಿ ದೇವರ ವಿಚಾರದಲ್ಲಿ ದುಂಡೀ ಸಾಹಿತಿಯೊಬ್ಬರು ಪ್ರಚಾರ ಪಡೆದಂತೆ ನೀವು ಅವರ ಸಾಲಿಗೆ ಸೇರಬೇಡಿ ಎಂದರು. ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್, ನಗರಾಧ್ಯಕ್ಷ ಶ್ರೀನಿವಾಸ್, ನಗರ ಕಾರ್ಯದರ್ಶಿ ಮಹೇಶ್ ಇದ್ದರು.
'ಕ್ರೀಡಾಕೂಟದಲ್ಲಿ ಆರೋಗ್ಯ ಸ್ಪರ್ಧೆ'
ಹಾಸನ: ಕ್ರೀಡಾಕೂಟದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪ್ರೌಢಶಾಲೆಗಳ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಮೂರು ದಿವಸಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಮಟ್ಟದಿಂದ ವಿಜೇತರಾಗಿ,  ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಾಗುತ್ತಿದೆ. ಯಾವುದೇ ಸ್ಪರ್ಧೆ ನಡೆದರೂ ಅದು ಆರೋಗ್ಯಕರ ವಾತಾವರಣ ಸೃಷ್ಟಿಸ ಬೇಕೆಂದು ಸಲಹೆ ನೀಡಿದರು. ಕ್ರೀಡೆಯಿಂದ ವಿದ್ಯಾರ್ಥಿಗಳು ಹಿಂದೆ ಸರಿಯದೆ ಭಾಗವಹಿಸಿ ಮುಂದೆ ಬರುವಂತೆ ಕಿವಿಮಾತು ಹೇಳಿದರು.
ಕ್ರೀಡಾಪಟುಗಳಿಗೆ ಈಗ ಟೀಶರ್ಟ್ ನೀಡಲಾಗುತ್ತಿದ್ದು, ಮುಂದಿನ ದಿವಸಗಳಲ್ಲಿ ಶೋಸ್ ನೀಡುವ ಬಗ್ಗೆ ಯೋಚಿಸಲಾಗುವುದೆಂದರು. ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳ ಪಥ ಸಂಚಲನವು ಇನ್ನೂ ಉತ್ತಮವಾಗಿರ ಬೇಕಿತ್ತು. ತರಬೇತುದಾರರು ಈ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದರು.
 ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಡಿ.ಟಿ. ಪುಟ್ಟರಾಜ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ಶಿವೇಗೌಡ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement