ಇಂದು, ನಾಳೆ ಇನ್ನರ್‌ವ್ಹೀಲ್ ಸಮಾವೇಶ
ಅರಸೀಕೆರೆ: ರೋಟರಿ ಜಿಲ್ಲೆಯಾದ 5 ಕಂದಾಯ ಜಿಲ್ಲೆಗಳಿಂದ 39 ಇನ್ನರ್‌ವೀಲ್ ಕ್ಲಬ್‌ಗಳ ಸದಸ್ಯರು, ಪದಾಧಿಕಾರಿಗಳು, ಸೆ.28 ಮತ್ತು 29 ರಂದು ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಸುಮಾರು 400 ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ ಎಂದು ಸಮ್ಮೇಳನ ಚೇರ್ಮನ್ ಭರತ್ ತಿಳಿಸಿದ್ದಾರೆ.
28 ರಂದು ಸಂಜೆ ಸಾಂಸ್ಕತಿಕ ಕಾರ್ಯಕ್ರಮಗಳು ಹಾಗು ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದು ವಿವಿಧ ಕ್ಲಬ್‌ಗಳ ಸ್ನೇಹ ವಿನಿಮಯ, ಮತ್ತು ಸಾಮಾಜಿಜಕ ಸೇವೆಯಲ್ಲಿ ಯಾವ ಯಾವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂಬುದನ್ನು ವಿನಿಮಯಮಾಡಿಕೊಳ್ಳಲು ಈ ಸಮಾವೇಶ ಸಹಕಾರಿಯಾಗಲಿದೆ.
ಅಲ್ಲದೆ ನಾವು ಮಾಡಿರುವ ಇತರ ಶಿಬಿರಗಳ ಅನುಭವವನ್ನು ವಿನಿಮಯ ಮಾಡಿಕೊಲ್ಲಲಾಗುತ್ತದಲ್ಲದೆ, ಇತರ ಹೊಸ ಕಾರ್ಯಕ್ರಮ ರೂಪಿಸಿಕೊಳ್ಳಲೂ ಇದು ಸಹಕಾರಿಯಾಗಲಿದೆ ಎಂದ ಅವರು ಸಾಮಾಜಿಕ ಸೇವೆಯಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹೇಗೆ ರೂಪಿಸಬಹುದು, ಎಂಬ ಬಗ್ಗೆಯೂ ಚಿಂತನೆ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅರಸೀಕೆರೆಯಲ್ಲಿ ಪ್ರಪ್ರಥಮ ಬಾರಿಗೆ ಸಮಾವೇಶ ನಡೆಯುತ್ತಿರುವುದು ಬಳಗಕ್ಕೆ ಸಂತಸ ತಂದಿದೆ ಎಂದು ಹೇಳಿದರು.ಸಾಂಸ್ಕೃತಿಕ ಕಾರ್ಯಕ್ರಮ, ಮತ್ತು ಮುನ್ನಾ ದಿನ ಮೆಹಂದಿ, ಫೈರ್,ಮತ್ತು ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಸಂಧ್ಯಾವಿಶ್ವನಾಥ್ ತಿಳಿಸಿದರು.