ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏಷ್ಯಾದಲ್ಲೇ ಪ್ರಥಮ ಸಹಕಾರಿ ಸಂಘ ಸ್ಥಾಪನೆಯಾಗಿದ್ದು ಕಣಗಿನಹಾಳುನಲ್ಲಿ

Vishwanath S
Updated On : 28 Sept 2013, 12:20 pm

ಹಾಸನ: ಮಹಾತ್ಮ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸು ನನಸಾಗಲು ಸಹಕಾರ ಕ್ಷೇತ್ರದ ಚಳವಳಿಯಿಂದ ಮಾತ್ರ ಸಾಧ್ಯ. ಈ ಚಳವಳಿಗಳು ಗ್ರಾಮೀಣ ಮಟ್ಟದಲ್ಲಿ ಇನ್ನೂ ಸದೃಢವಾಗಿ ಕಾರ್ಯಕ್ಷಮತೆಯಿಂದ ಕಾರ್ಯ ನಿರ್ವಹಿಸುವಂತಾದಾಗ ಮಾತ್ರ ಸ್ವಾಭಿಮಾನಿ, ಬಲಶಾಲಿ ಭಾರತ ನಿರ್ಮಿಸಲು ಸಾಧ್ಯ ಎಂದು ಮಲ್ನಾಡ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಅವರು ಸಂಘದ 2 ನೇ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಏಷ್ಯಾ ಖಂಡದಲ್ಲೇ ಪ್ರಪ್ರಥಮವಾಗಿ ಸಹಕಾರಿ ಸಂಘ ಸ್ಥಾಪನೆಯಾಗಿದ್ದು ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳು ಎಂಬ ಗ್ರಾಮದಲ್ಲಿ 1905 ರ ಜುಲೈ 8 ರಂದು. ಆಂಗ್ಲರ ಆಡಳಿತವಿದ್ದ ಕಾಲದಲ್ಲಿ ಷರತ್ತು ಹಾಕುವ ಮೂಲಕ ಕನ್ನಡಿಗರು ಸ್ಥಾಪಿಸಿದ ಸಹಕಾರಿ ಸಂಘ. ಆ ಸಂಘದ ಸಂಸ್ಥಾಪಕರೇ ಶಿದ್ದನಗೌಡ ಸಣ್ಣರಾಮನಗೌಡ ಪಾಟೀಲ್. ಅಂದು ಹುಟ್ಟು ಹಾಕಿದ ಸಹಕಾರಿ ಸಂಘ ಇಂದು ಹೆಮ್ಮರವಾಗಿ ಬೆಳೆದು ರಾಜ್ಯ ಸರ್ಕಾರದ ಒಬ್ಬ ಸಂಪುಟ ದರ್ಜೆಯ ಸಹಕಾರಿ ಸಚಿವ ಹಾಗೂ ಸಹಕಾರಿ ಇಲಾಖೆಗಾಗಿ ಐ.ಎ.ಎಸ್, ಕೆ.ಎ.ಎಸ್ ಸೇರಿದಂತೆ ಇತರೆ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಮಾಡಿದೆ ಎಂದು ವಿವರಿಸಿದರು.
ಸಮಾಜದ ವಿವಿಧ ಆಯಾಮಗಳಲ್ಲಿ ತೊಡಗಿಸಿ ಕೊಂಡಿರುವ ಸಹಕಾರಿ ಸಂಘಗಳು ಗ್ರಾಮೀಣ ಜನತೆಯ ಆರ್ಥಿಕ ಸುಧಾರಣೆ ತರುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಪ್ರಸಕ್ತ ದಿನಗಳಲ್ಲಿ ಬ್ಯಾಂಕುಗಳು ಆರ್ಥಿಕವಾಗಿ ಸಬಲರಾಗಿ ರುವವರಿಗೆ ಮಾತ್ರ ಸೇವೆ ಒದಗಿಸಲು ಮುಂಚೂಣಿಯಲ್ಲಿರುತ್ತವೆ. ಆದರೆ ಆರ್ಥಿಕವಾಗಿ ಹಿಂದುಳಿದವರ ಸಹಾಯಕ್ಕೆ ಸಹಕಾರ ಸಂಘಗಳ ಸೇವೆ ಮಹತ್ತರವಾಗಿದೆ ಎಂದು ಹೇಳಿದರು.
 ಸಹಕಾರ ಸಂಘಗಳು ಪ್ರವರ್ಧಮಾನಕ್ಕೆ ಬರಲು ಸಹಕಾರಿ ಸಂಘಗಳಲ್ಲಿ ಜನಸಾಮಾ ನ್ಯರು ಹಣ ತೊಡಗಿಸಿದ್ದೇ ಆದಲ್ಲಿ ಷೇರುದಾರರಿಗೆ ಸಾಲ ನೀಡಲು ಸಹಾಯಕವಾಗುತ್ತದೆ. ಸಾಲ ಪಡೆದವರು ನಿಯಮಿತವಾಗಿ ಹಣ ವನ್ನು ಮರು ಪಾವತಿಸಿದ್ದೇ ಆದಲ್ಲಿ ಷೇರುದಾರರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗುತ್ತದೆ. ಸಹಕಾರಿ ಸಂಘಗಳು ಮಧ್ಯಮ ವರ್ಗ ದವರಿಗೆ ಹೆಚ್ಚು ಪ್ರಯೋಜನಕಾರಿಯಾಗಿವೆ ಎಂದು ನುಡಿದರು.
ಸಂಘದ ಉಪಾಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ್ ಸಂಘ ನಡೆದು ಬಂದ ಹಾದಿ ಮತ್ತು ಧ್ಯೇಯೋ ದ್ದೇಶ ತಿಳಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಇ.ಎಸ್. ಪ್ರಸಾದ್ ವರದಿ ಮಂಡಿಸಿದರು. ನಿರ್ದೇಶಕ ಪ್ರಕಾಶ್ ನಿರೂಪಿಸಿದರು. ನಿರ್ದೇಶಕರು ಮತ್ತು ಷೇರುದಾರರು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement