ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಾಥಮಿಕ ಶಿಕ್ಷಣ ಸಚಿವರ ಪ್ರವಾಸ

Vishwanath S
Updated On : 28 Sept 2013, 12:23 pm

ಹಾಸನ: ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸೆ. 28ರಂದು ಅರಕಲಗೂಡಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಅರಕಲಗೂಡಿಗೆ ಆಗಮಿಸುವ ಸಚಿವರು ಬೆಳಗ್ಗೆ 10 ಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಭವನದಲ್ಲಿ ನಡೆಯುವ ತಾಲೂಕು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12 ಗಂಟೆಗೆ ಅರಕಲಗೂಡಿನಿಂದ ಚಿಕ್ಕಮಗಳೂರಿಗೆ ತೆರಳುವರು.

ಲೋಕಾ ಪೊಲೀಸ್ ಅಧೀಕ್ಷಕರ ಪ್ರವಾಸ
ಹಾಸನ: ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಡಾ.ಬಿ.ವೇದಮೂರ್ತಿ ಮತ್ತು ತಂಡದವರು ಸೆ. 28ರಂದು ಬೇಲೂರು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ  ನಂತರ ಹಾಸನ ತಾ. ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ  2 ರಿಂದ ಸಂಜೆ 5.30 ರವರೆಗೆ ಭೇಟಿ ನೀಡುವರು. ಆ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳುನ್ನು ಸಲ್ಲಿಸಬಹುದಾಗಿದೆ ಎಂದು  ಲೋಕಾಯುಕ್ತ ಹಾಸನ ವಿಭಾಗದ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

ಶನಿವಾರ, ಸೆ. 28
ಶ್ರೀ ಗಣಪತಿ ಸೇವಾ ಸಂಸ್ಥೆ: 59 ನೇ ವರ್ಷದ ಗಣೇಶೋತ್ಸವ ಅಂಗವಾಗಿ ಶ್ರೀಯವರಿಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ 12.30,  ಹಾಸನಾಂಬ ಕಲಾ ಸಂಘದ ಗುಂಡುರಾಜ ನಿರ್ದೇಶನದಲ್ಲಿ  ಶ್ರೀಕೃಷ್ಣ ಗಾರುಡಿ ಪೌರಾಣಿಕ ನಾಟಕ ಪ್ರದರ್ಶನ, ಗಣಪತಿ ಪೆಂಡಾಲ್ ಆವರಣ, ಹಳೇ ಬಸ್‌ನಿಲ್ದಾಣ ರಸ್ತೆ,   ಸಂಜೆ 6.
ಅಲ್ಲಲ್ಲಿ ಏನೇನು?
ಹೊಳೆನರಸೀಪುರ ತಾಲೂಕು: ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ - 56ನೇ ವರ್ಷದ ಗಣೇಶೋತ್ಸವ ಅಂಗವಾಗಿ ಚಲನಚಿತ್ರ ಹಾಸ್ಯ ನಟ ಬಿರಾದಾರ್ ಹಾಗೂ ದೂರದರ್ಶನ ಕಲಾವಿದರಿಂದ ಹಾಸ್ಯ-ಲಾಸ್ಯ. ಪಟ್ಟಣದಲ್ಲಿ, ಸಂಜೆ 7.
ಸರ್ಕಾರಿ ಪದವಿ ಪೂರ್ವ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಅಂಗವಾಗಿ  ಕೃಷಿಯಲ್ಲಿ ತಾಂತ್ರಿಕತೆಗಳು ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ, ಉಪನ್ಯಾಸ ನೀಡುವವರು - ಕೃಷಿ ಇಲಾಖೆ ಸಹಾಯಕ ನಿರ್ದೇಶಕ  ಡಾ.ಯು.ಎಚ್.ಭಾನುಪ್ರಕಾಶ್, ಅಧ್ಯಕ್ಷತೆ  ಗ್ರಾಪಂ ಅಧ್ಯಕ್ಷ  ಬಿ.ಸಿ.ಶಿವಕುಮಾರ್, ಸಂಜೆ 5. ನಂತರ ಮಾರನಾಯಕನಹಳ್ಳಿ ಎಂ.ಎನ್.ಲೋಕೇಶ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೀಚೇನಹಳ್ಳಿ ಗ್ರಾಮ.

ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಶುಕ್ರವಾರ 2693 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ಮಟ್ಟ 2921.50 ಅಡಿ, 36.619 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.726 ಅಡಿ, ಒಳ ಹರಿವು 125 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3167 ಅಡಿ, ಒಳ ಹರಿವು 20 ಕ್ಯುಸೆಕ್, ಹೊರ ಹರಿವು ನಾಲೆಗೆ 120 ಕ್ಯುಸೆಕ್, ಒಟ್ಟು 1.398 ಟಿಎಂಸಿ ನೀರು ಸಂಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement