ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಾದವ ಸಮುದಾಯದ ಯುವ ಘಟಕ ರಚನೆ

Vishwanath S
Updated On : 28 Sept 2013, 12:21 pm

ಕ.ಪ್ರ.ವಾರ್ತೆ ,  ಅರಸೀಕೆರೆ ,  ಸೆ. 27
ಯಾದವ ಸಮುದಾಯದ ನೂತನ ತಾಲೂಕು ಯುವಘಟಕ ರಚಿಸಲಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸೇವೆ ಸಲ್ಲಿಸಲು ಬದ್ಧವಾಗಿದೆ ಎಂದು ರಾಜ್ಯ ಯಾದವ ಯುವ ಸೇನೆಯ ಖಜಾಂಚಿ ಅಮ್ಮನಹಟ್ಟಿ ಹರೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಯಾದವ ಯುವ ಸೇನೆಯು ಗುಂಪು ರಕ್ತ ಪರೀಕ್ಷೆ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಸೇನೆಯು ಯಾವುದೇ ಜಾತಿ, ಪಂಗಡ, ಧರ್ಮ ಆಧರಿಸಿ ಕಾರ್ಯಕ್ರಮ ರೂಪಿಸುವ ಯೋಜನೆ ತಮ್ಮದಲ್ಲ. ಬದಲಾಗಿ ದುರ್ಬಲರ, ನೊಂದವರ, ಹಿಂದುಳಿದವರ ಸೇವೆ ಮಾಡುವ ಮೂಲಕ ಯಾದವ ಸೇನೆ ಕಾರ್ಯಕ್ರಮಗಳನ್ನು ರೂಪಿಸಲಿದೆ. ಪ್ರತಿ ಹಳ್ಳಿ-ಹಳ್ಳಿಗಳಿಗೆ ತೆರಳಿ ಜನರಲ್ಲಿ ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜಾಗೃತಿ ಉಂಟುಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಯಾದವ ಸಮುದಾಯಕ್ಕೆ ತನ್ನದೇ ಆದ ಇತಿಹಾಸ, ಪರಂಪರೆಯಿದ್ದು ಗ್ರಾಮೀಣ ಪ್ರದೇಶದಲ್ಲಿ ಯಾದವ ಸಮುದಾಯ ಇಂದಿಗೂ ಅಸ್ತಿತ್ವದಲ್ಲಿ ಉಳಿಸಿಕೊಂಡಿರುವ ಕೆಲವು ಮೂಢನಂಬಿಕೆಗಳ ವಿರುದ್ಧ ಅರಿವು ಮೂಡಿಸುವ ಮೂಲಕ ಅವರಲ್ಲಿಯೂ ಜಾಗೃತಿ ಉಂಟುಮಾಡುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ನೆಲ-ಜಲ, ಭಾಷೆ, ಸಂಸ್ಕೃತಿ, ಇನ್ನಿತರೆ ವಿಷಯಗಳಿಗೆ  ಸಂಬಂಧಿಸಿದಂತೆ ನಾನಾ ಸಂಘಟನೆಗಳು ನಡೆಸುವ ಜನಪರ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಸಹಾಯಹಸ್ತ ನೀಡಲಾಗುವುದು. ಇದೊಂದು ರಾಜಕೀಯ ಪಕ್ಷಗಳಿಂದ ದೂರವಿರುವ ಸಂಘಟನೆಯಾಗಿದೆ. ಈ ವಿಷಯದಲ್ಲಿ ಯಾವುದೇ ರಾಜೀ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನ ಕಾರ್ಯದರ್ಶಿ ನಾಗರಾಜ್, ಪತ್ರಿಕಾ ಕಾರ್ಯದರ್ಶಿ ನಿರಂಜನ್, ತಾಲೂಕು ಅಧ್ಯಕ್ಷ ಶಶಿಕುಮಾರ್, ಸಂಚಾಲಕ ಕುಮಾರಸ್ವಾಮಿ, ನಗರಾಧ್ಯಕ್ಷ ಜಯ ಯಾದವ್, ಮಂಜುನಾಥ್, ಉಪಾಧ್ಯಕ್ಷ ವಿರೂಪಾಕ್ಷ, ಮಹೇಶ್, ಸಿದ್ದೇಶ್, ಗಂಗಾಧರ್, ಮಂಜುನಾಥ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement