ಹಿರಿಯ ಪತ್ರಕರ್ತ ಶಿವಮೂರ್ತಪ್ಪ ನಿಧನ
ಅರಸೀಕೆರೆ: ತಾಲೂಕಿನ ಹರಳಕಟ್ಟ ಗ್ರಾಮದ ಹಿರಿಯ ಪತ್ರಕರ್ತ ಎಚ್.ಜಿ.ಶಿವಮೂರ್ತಪ್ಪ(86) ಶುಕ್ರವಾರ ನಿಧನರಾದರು. ಪತ್ರಿಕಾ ರಂಗದಲ್ಲಿ ಬಹಳ ವರ್ಷಗಳಿಂದ ಸೇವೆ ಮಾಡುತ್ತಿದ್ದು ಕೆಲ ದಿನಗಳಿಂದ ಅವರು ಅನಾರೋಗ್ಯದಲ್ಲಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ವಿಧಿವಶರಾದರು. ಮೃತರಿಗೆ ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಶಾಂತಕುಮಾರ್, ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ಸೇತುರಾಂ, ಎನ್.ಡಿ.ಪ್ರಸಾದ್, ಬಿ.ಪುರಂದರದಾಸ್, ಮಾಡಾಳು ಶಿವಲಿಂಗಪ್ಪ ಹಾಗೂ ಸದಸ್ಯರು, ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಾಜಿ ಶಾಸಕರಾದ ಪ್ರಭುಕುಮಾರ್, ಎ.ಎಸ್.ಬಸವರಾಜ್, ಜಿ.ಎಸ್.ಪರಮೇಶ್ವರಪ್ಪ, ಪುರಸಭಾಧ್ಯಕ್ಷ ಮೋಹನ್‌ಕುಮಾರ್, ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಅಂತ್ಯಕ್ರಿಯೆ ಹರಳಕಟ್ಟದಲ್ಲಿ ಶನಿವಾರ ನಡೆಯಲಿದೆ ಎಂದು ಅವರ ಪುತ್ರ ಗಿರೀಶ್ ತಿಳಿಸಿದ್ದಾರೆ.