ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

30 ಕೋಟಿ ಬಿಡುಗಡೆ

Vishwanath S
Updated On : 30 Sept 2013, 12:14 pm

ಕ.ಪ್ರ. ವಾರ್ತೆ, ಸಕಲೇಶಪುರ, ಸೆ. 29
ಕಾಡಾನೆ ಹಾವಳಿ ತಡೆಗಟ್ಟಲು ಹಾಸನ ಒಳಗೊಂಡಂತೆ ಮೂರು ಜಿಲ್ಲೆಗಳಿಗೆ 30 ಕೋಟಿ ರು.ಗಳನ್ನು ಈಗಾಗಲೆ ಬಿಡುಗಡೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ತಾಲೂಕಿನ ಶಿರಾಡಿ ಗಡಿ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಆಡಳಿತ ನಡೆಸಿದ ಸರಕಾರಗಳು ಅರಣ್ಯಗಳಲ್ಲಿ ಪವರ್ ಪ್ರಾಜೆಕ್ಟ್‌ಗಳಿಗೆ  ಅವಕಾಶ ಕೊಟ್ಟ ಕಾರಣದಿಂದ ಅರಣ್ಯಗಳು  ನಾಶವಾಗಿದ್ದಲ್ಲದೆ, ಶಬ್ದದಿಂದಾಗಿ ಆನೆಗಳು ವಿಚಲಿತ ಗೊಂಡು ಆನೆಗಳು ಗ್ರಾಮದ ಕಡೆಗೆ ಲಗ್ಗೆ ಇಟ್ಟಿವೆ ಎಂದರು.
ಪುಂಡಾನೆಗಳನ್ನು ಹಿಡಿಯಲು ವನ್ಯಜೀವಿ ಕಾಯ್ದೆಗಳು ಅಡ್ಡಿಪಡಿಸುವುದರಿಂದ, ಹಲವು ವರ್ಷಗಳಿಂದ  ಸಮಸ್ಯೆಯಾಗಿದ್ದು ಇದರ ಪರಿಹಾರಕ್ಕೆ ಚಾಮರಾಜ, ಕೊಡಗು ಹಾಗೂ ಹಾಸನ ಜಿಲ್ಲೆ ಶಾಸಕರೊಂದಿಗೆ ಚರ್ಚಿಸಿದ್ದೇನೆ.
ಆನೆಗಳು ಊರಿನಕಡೆ ಸಂಚರಿಸದಂತೆ ಅರಣ್ಯ ಪ್ರದೇಶದಲ್ಲಿ  ಬಾರಿ ಕಂದಕಗಳನ್ನು, ಸೋಲಾರ್ ಬೇಲಿಯನ್ನು ಮತ್ತು ಅನುಪಯುಕ್ತ ರೈಲ್ವೆ ಕಂಬಿಗಳಿಂದ ಆನೆ ಓಡಾಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದರು.
ಆನೆ ಹಾವಳಿ ಶಾಶ್ವತ ಪರಿಹಾಕ್ಕಾಗಿ ಸರ್ಕಾರ 100 ಕೋಟಿ ರು.ಹಣವನ್ನು ಮೀಸಲಟ್ಟಿದ್ದು  ಇದರಲ್ಲಿ 30 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಆನೆ ಹಾವಳಿ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ  ಚರ್ಚಿಸಿ, ಆನೆ ಹಾವಳಿ ತಡೆಗಟ್ಟಲು ಗಂಬೀರ  ಪ್ರಯತ್ನ ನಡೆಸಲಾಗುವುದು ಎಂದು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement