ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಪ್ರಾಥಮಿಕ ಸಹಕಾರ ಸಂಘದ ಹರಾಜು ಪ್ರಕ್ರಿಯೆ

Vishwanath S
Updated On : 30 Sept 2013, 12:15 pm

ಆಲೂರು: ಪಟ್ಟಣದಲ್ಲಿ ಜಿಲ್ಲಾ ಡಿಸಿಸಿಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಂದ ಉದ್ಘಾಟನೆಗೊಂಡ ಆಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 4 ಮಳಿಗೆಗಳಿಗೆ ಸೆ.30ರಂದು ಬೆಳಗ್ಗೆ 10.30ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ತಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ.ಶಿವರಾಮೇಗೌಡ ತಿಳಿಸಿದ್ದಾರೆ.
 ಇಲ್ಲಿರುವ 4 ಮಳಿಗೆಗಳ ಪೈಕಿ ಕೆಳ ಭಾಗದಲ್ಲಿ ಇರುವ 12್ಢ10 ಅಳತೆಯ 2 ಮಳಿಗೆಗಳಿಗೆ ತಲಾ 3 ಲಕ್ಷ ರು.ಮುಂಗಡ ಹಣ ನಿಗದಿ ಪಡಿಸಿದ್ದು, 2500 ರು.ಮೇಲ್ಪಟ್ಟು ಬಾಡಿಗೆಗೆ ಹರಾಜು ಕೂಗಬಹುದಾಗಿದೆ. ಮೇಲ್ಭಾಗದಲ್ಲಿ ಇರುವ 12್ಢ10 2 ಮಳಿಗೆಗಳಿಗೆ 1.5 ಲಕ್ಷರು. ಮುಂಗಡ ಹಣ ನಿಗದಿ ಪಡಿಸಿದ್ದು, 1500 ರು.ಮೇಲ್ಪಟ್ಟು ಬಾಡಿಗೆಗೆ ಹರಾಜು ಕೂಗ ಬಹುದಾಗಿದೆ. ಈ ಮಳಿಗೆಗಳ ಹರಾಜು 2 ವಿಧದಲ್ಲಿ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಸೀಕ್ರೆಟ್ ಟೆಂಡರ್ ಇದ್ದರೆ, ಮಧ್ಯಾಹ್ನ 2ರ ನಂತರ ಓಪನ್ ಟೆಂಡರ್ ಇರುತ್ತದೆ.
 ಸಂಜೆ 5ರ ನಂತರ ಸೀಕ್ರೆಟ್ ಹಾಗೂ ಓಪನ್ ಟೆಂಡರ್‌ಗಳನ್ನು ಪರಿಶೀಲಿಸಿ 2ರ ಪೈಕಿ ಯಾರು ಹೆಚ್ಚಿನ ಬಾಡಿಗೆ ನೀಡಲು ತಯಾರಿದ್ದಾರೆ ಅಂತವರಿಗೆ ಮಳಿಗೆ ನೀಡಲಾಗುತ್ತದೆ. ಇದರಲ್ಲಿ ಭಾಗವಹಿಸುವವರು 100 ರು.ಗಳ ಅರ್ಜಿ ಶುಲ್ಕದೊಂದಿಗೆ 25 ಸಾವಿರ ಹಣ ವನ್ನು ಕಟ್ಟಬೇಕಾಗುತ್ತದೆ. ಈ ರೀತಿ ಮಾಡುವುದರಿಂದಾಗಿ ಎಲ್ಲರಿಗೂ ಸಮಾನ ನ್ಯಾಯ ದೊರಕಂತಾಗುತ್ತಿದೆ. ಅದಕ್ಕಾಗಿ ನಾವು ಈ ಎರಡು ರೀತಿಯಲ್ಲಿ ಟೆಂಡರ್ ನಡೆಸಲು ತೀರ್ಮಾನಿಸಿದೆ ಎಂದ ಅವರು, ಬಾಡಿಗೆ ಹಣದ ಮೊತ್ತ ತೃಪ್ತಿಕರವಾಗಿಲ್ಲದಿದ್ದರೆ ಯಾವುದೇ ನಿರ್ಧಾರ ಕೈಗೊಳ್ಳಲು ಸಂಘಕ್ಕೆ ಅಧಿಕಾರವಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement