ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತರ ಸಹಭಾಗಿತ್ವದಲ್ಲಿ ಎಸ್.ಎಂ.ಕೃಷ್ಣ ಬಡಾವಣೆ ಯೋಜನೆ

Vishwanath S
Updated On : 30 Sept 2013, 12:16 pm

ಹಾಸನ: ರೈತರ ಸಹಭಾಗಿತ್ವದಲ್ಲಿ ಎಸ್.ಎಂ.ಕೃಷ್ಣ ಬಡಾವಣೆ ಯೋಜನೆ ತಯಾರಿಸಿದ್ದು, ಇದೊಂದು ಉತ್ತಮ ಯೋಜನೆಯಾಗಿದೆ. ವಾರದೊಳಗೆ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕ ಎಸ್.ಪಿ ಹೊನ್ನೂರು ತಿಳಿಸಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿ.ಅನ್ವುಕುಮಾರ್ ಅಧ್ಯಕ್ಷತೆಯಲ್ಲಿ ಎಸ್.ಎಂ.ಕೃಷ್ಣ ಬಡಾವಣೆ ಯೋಜನೆ ಕುರಿತಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಗರದ ಅಭಿವೃದ್ಧಿ ದೃಷ್ಟಿಯಿಂದ ನೋಡಿದಾಗ ಇದೊಂದು ಉತ್ತಮ ಕೊಡುಗೆ ಎಂದ ಅವರು ಈ ಯೋಜನೆಯಲ್ಲಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಿ ರೂಪಿಸಿರುವುದರಿಂದ ಜನತೆಗೆ ಸಹಕಾರಿಯಾಗಲಿದೆ ಎಂದರು.  ಜನರಿಂದ ಈಗಾಗಲೇ ಹಣ ಸಂಗ್ರಹಿಸಿರುವುದರಿಂದ ಆದಷ್ಟು ಬೇಗ ನಿವೇಶನಗಳನ್ನು ಪಾರದರ್ಶಕವಾಗಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಿವೇಶನ ಕೋರಿ 9009 ಅರ್ಜಿ ಸಲ್ಲಿಕೆಯಾಗಿದ್ದು 55.39 ಕೋಟಿ ರು ಸಂಗ್ರಹವಾಗಿದೆ ಎಂದು ತಿಳಿಸಿದರು.
 ಉದ್ದೇಶಿತ ಬಡಾವಣೆಯಲ್ಲಿ 20್ಢ30 ಅಳತೆಯ 1003 ನಿವೇಶನಗಳು ,30್ಢ40 ಅಳತೆಯ 1805, 30್ಢ50 ಅಳತೆಯ 2,322, 40್ಢ60 ಅಳತೆಯ 670 ಹಾಗೂ 50್ಢ80 ಅಳತೆಯ 98 ನಿವೇಶನಗಳಿವೆ ಎಂದರು.
 ವಿಧಾನ ಪರಿಷತ್ ಸದಸ್ಯ  ಪಟೇಲ್ ಶಿವರಾಂ ಅವರು ಮಾತನಾಡಿ ಯಾವುದೇ  ಲೋಪವಾಗದಂತೆ ನಿವೇಶನಗಳು ಹಂಚಿಕೆಯಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement