ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಲ್ಲುಂಡಿಯಲ್ಲಿ ಗೌರಮ್ಮ ದೇವಿ ವಿಸರ್ಜನೋತ್ಸವ

Vishwanath S
Updated On : 1 Oct 2013, 12:37 pm

ಅರಸೀಕೆರೆ: ಕಳೆದ 18 ದಿನಗಳಿಂದ ಪ್ರತಿಷ್ಠಾಪಿಸಿದ್ದ ತಾಲೂಕಿನ ಕಲ್ಗುಂಡಿ ಗ್ರಾಮದ ಗೌರಮ್ಮ ದೇವಿಯನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಕಲ ವಿಧಿ ವಿಧಾನಗಳ ಮೂಲಕ ಪೂಜಿಸಿ ಭಾನುವಾರ ಸಂಜೆ ವಿಸರ್ಜಿಸಲಾಯಿತು. ಗೌರಮ್ಮನ ವಿಸರ್ಜನಾ ಮಹೋತ್ಸವ ಅಂಗವಾಗಿ ಕಳೆದ 3 ದಿನಗಳಿಂದ ಭಕ್ತರ ಸಮೂಹವೇ ಈ ಕುಗ್ರಾಮದತ್ತ ಹರಿದು ಬಂದಿದ್ದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿದ ತಾಯಿಗೆ ಹರಕೆ ಸಲ್ಲಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವಿಗೆ ಭಕ್ತಿ ನಮನ ಸಲ್ಲಿಸಿದರು.
ಪದ್ಮಾಸನದಲ್ಲಿ ಕುಳಿತ ಗೌರಮ್ಮನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಭಕ್ತರು ತಮ್ಮ ಹೆಗಲ ಮೇಲೆ ಹೊತ್ತು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಉತ್ಸವಗಳನ್ನು ನೆರವೇರಿಸಿದರು. ಮಹೋತ್ಸವದ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ನವವಧುವಿನಂತೆ ಶೃಂಗರಿಸಲಾಗಿತ್ತು. ಸಕಲ ವಿಧಿ ವಿಧಾನಗಳ ಮೂಲಕ ಪೂಜಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ನಂತರ ವಿಸರ್ಜಿಸಲಾಯಿತು. ನಾಡಿನ ಮೂಲೆ ಮೂಲೆಗಳಿಂದ ಭಕ್ತರ ದಂಡು ತಂಡೋಪತಂಡವಾಗಿ ಕಲ್ಗುಂಡಿ ಗ್ರಾಮಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ತಮ್ಮ ಹರಕೆ ತೀರಿಸಿ ವಿವಿಧ ಪೂಜಾಕೈಂಕರ್ಯಗಳಲ್ಲಿ ಪಾಲ್ಗೊಂಡು ಪುನೀತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement