ಗೆಂಡೇಹಳ್ಳಿಯಲ್ಲಿ ಪೊಲೀಸ್ ಔಟ್ಪೋಸ್ಟ್: ಎಸ್ಪಿಗೆ ಪತ್ರ
ಕ.ಪ್ರ. ವಾರ್ತೆ , ಬೇಲೂರು , ಸೆ.30
ಗೆಂಡೇಹಳ್ಳಿ ಗ್ರಾಮದಲ್ಲಿ ಪೊಲೀಸ್ ಔಟ್ಪೋಸ್ಟ್ ಆರಂಭಿಸುವ ಬಗ್ಗೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ಪಿಎಸ್ಐ ಅಶ್ವಿನ್ಕುಮಾರ್ ಹೇಳಿದರು.
ಗೆಂಡೇಹಳ್ಳಿ ಗ್ರಾಪಂ ಅಧ್ಯಕ್ಷ ಭದ್ರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಿಗದಿ ಪಡಿಸಿರುವುದಕ್ಕಿಂತ ಅಧಿಕ ಭಾರ ಹಾಕಿ ಸಂಚರಿಸುವ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದ್ವಿಚಕ್ರ ಸವಾರರಿಗೆ ತೊಂದರೆ ಕೊಡಬಾಡದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ದಂಡ ಹಾಕಲಾಗುವುದು. ಸಂತೆದಿನ ಇಬ್ಬರು ಪೇದೆಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಗೆಂಡೇಹಳ್ಳಿಯ ಸರ್ಕಾರಿ ಮದ್ಯದಂಗಡಿಯನ್ನು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8-30 ವರೆಗೆ ಮಾತ್ರ ತೆರೆಯಬೇಕು.
ಶಾಲಾ ಆವರಣದಲ್ಲಿ ಜೂಜು ನಡೆಯುತ್ತಿದ್ದು ಈ ಬಗ್ಗೆ ಪ್ರಶ್ನೆ ಮಾಡುವುದೆ ಕಷ್ಟದ ಸ್ಥಿತಿಯಾಗಿದೆ ಎಂದು ಗ್ರಾಮದ ಜಗನ್ನಾಥ್ ತಿಳಿಸಿದರು. ಶಾಲೆ ಆವರಣದಲ್ಲಿ ಜೂಜು ನಡೆಯುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ಪಿಎಸ್ಐ ಹೇಳಿದರು.
ಅಂಗನವಾಡಿ ಶಿಕ್ಷಕಿ ರುಕ್ಮಿಣಿ ಟಿಂಬರ್ ಸಾಗಿಸುವ ಲಾರಿಗಳ ಚಾಲಕರು ದ್ವಿಚಕ್ರ ಸವಾರರಿಗೆ ಅವಕಾಶ ಕೊಡದೆ ಚಾಲನೆ ಮಾಡುತ್ತಾರೆ. ಪ್ರಶ್ನಿಸಿದರೆ ಉಡಾಫೆಯಿಂದ ವರ್ತಿಸುತ್ತಾರೆ ಎಂದು ದೂರಿದರು. ಸಭೆಯಲ್ಲಿ ಹಕೀಂ, ಅಲ್ತಾಫ್ಅಹ್ಮದ್, ಯತೀಶ್ ಇತರರು ಹಾಜರಿದ್ದರು.