ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಖಜಾನೆಯಿಂದ ದೇಗುಲಕ್ಕೆ ಚನ್ನಕೇಶವಸ್ವಾಮಿ ಆಭರಣ

Rashmi Kasaragodu
Updated On : 2 Apr 2014, 2:33 am

ಬೇಲೂರು: ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಏ.4 ರಿಂದ ಪ್ರಾರಂಭಗೊಳ್ಳಲಿರುವುದರಿಂದ   ಚನ್ನಕೇಶವಸ್ವಾಮಿ ಭರಣಗಳನ್ನು ತಾಲೂಕು ಕಚೇರಿಯ ಉಪ ಖಜಾನೆ ಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ದೇವಾಲಯಕ್ಕೆ ತರಲಾಯಿತು.  ತಾಲೂಕು ಕಚೇರಿಯಲ್ಲಿರುವ ಉಪ ಖಜಾನೆಯಿಂದ ಚನ್ನಕೇಶವ ಸ್ವಾಮಿ  ದೇವಾಲಯಕ್ಕೆ ಪೊಲೀಸರ ಬಿಗಿ ಭದ್ರತೆಯಲ್ಲಿ ಮಂಗಳವಾದ್ಯ ಸಮೇತ ಮೆರವಣಿಗೆಯಲ್ಲಿ ತರಲಾಯಿತು.
ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅಗತ್ಯವಿರುವ ವಿವಿಧ  ಉತ್ಸವಗಳು ಮತ್ತು ಸಾಂಪ್ರಾದಾಯಿಕ ಪೂಜೆಗಳು ಜಯನಾಮ ಸಂವತ್ಸರದ ಚೈತ್ರ ಶುದ್ಧ ಪಂಚಮಿ ಏ. 4ರಂದು ದಿವ್ಯ ಶಾರಾದಾ ಆಲಂಕಾರೋತ್ಸವದಿಂದ ಆರಂಭಗೊಳ್ಳಲಿದ್ದು, ಏ.17 ರವರೆಗೆ ಪಾಂಚರಾತ್ರ್ಯಾಗಮ ರೀತ್ಯಾ ಕಾರ್ಯಕ್ರಮ ನಡೆಯಲಿವೆ  ದಿವ್ಯ ಚಂದ್ರಮಂಡಲಾ ರೋಹಣೋತ್ಸವ, ರಾಮನವಮಿ, ದಿವ್ಯ ಬೆಳ್ಳಿ ಮಂಟಪ ಉತ್ಸವ, ಹನುಮತೋತ್ಸವ, ಗರುಡೋತ್ಸವ ದಂತಹ  ಸಾಂಪ್ರದಾಯಿಕ ಉತ್ಸವಗಳು ನಡೆಯಲಿವೆ. ಏ.13ರಂದು ದಿವ್ಯ ರಥೋತ್ಸವ, ರಾತ್ರಿ ಡೋಲೋತ್ಸವ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement