ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜವರೇಗೌಡ ಅಕ್ರಮ ಬಹಿರಂಗ ಮಾಡ್ತೇವೆ: ಜೆಡಿಎಸ್ ಗುಟುರು

Rashmi Kasaragodu
Updated On : 2 Apr 2014, 2:31 am

ಬೇಲೂರು: ಮಾಜಿ ಸಚಿವ, ಶಾಸಕ ಎಚ್.ಡಿ. ರೇವಣ್ಣ ವಿರುದ್ಧ ವಿನಾ ಕಾರಣ 'ನಿಮ್ಮ ಸಿನಿಮಾ ಬಿಡುಗಡೆ  ಮಾಡುತ್ತೇವೆ' ಎಂಬ ಎಚ್.ಕೆ.ಜವರೇಗೌಡ ಹೇಳಿಕೆ ಖಂಡಿಸಿ ತಾಲೂಕು ಜೆಡಿಎಸ್ ಮುಖಂಡರು, ಜವರೇಗೌಡರ ಅಕ್ರಮಗಳನ್ನು ಬಹಿರಂಗ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ಜೆಡಿಎಸ್ ಕಾರ್ಯದರ್ಶಿ  ದಿಲೀಪ್‌ಕುಮಾರ್ ಮತ್ತಿತರರು, ಜವರೇಗೌಡರು ಈ ಬಾರಿ  ನಡೆಯುವ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಮತಗಳು ಕಾಂಗ್ರೆಸ್ ಪಾಲು ಎಂದು ಹೇಳುವ ಹಾಗೂ  ವೀರಶೈವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಇಲ್ಲ. ಕಾರಣ ಈ ಹಿಂದೆ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ದಿ. ಅಪ್ಪಣ್ಣಯ್ಯ ಸ್ಪರ್ಧೆ  ಮಾಡಿದ್ದ ಸಂದರ್ಭದಲ್ಲಿ ಅವರ ಸೋಲಿಗೆ ನೇರ ಕಾರಣವಾಗಿದ್ದು, ಅಲ್ಲದೆ ಅರೇಹಳ್ಳಿ ಜಿಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಿಗೆ ಕಾರಣರಾದ ಅವರು ಇವತ್ತು ಜೆಡಿಎಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರ್ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದು, ಈ ಕ್ಷೇತ್ರದಲ್ಲಿ ದಲಿತರ ಮೇಲೆ ನಿರಂತರ  ದಬ್ಬಾಳಿಕೆ ನಡೆಯುತ್ತಿದ್ದರೂ ಜಾಣ ಮೌನ ವಹಿಸಿದ್ದಾರೆ. ಉದಾಹರಣೆಗೆ ಬೇಲೂರು ತಾಲೂಕಿನ ಹಳೇಬೀಡು ಗಂಗೂರು ಗ್ರಾಮದಲ್ಲಿ ನಡೆದ ದಲಿತರ ಮೇಲೆ ದೌರ್ಜನ್ಯ ನಡೆದಾಗ ಕನಿಷ್ಠ ಸೌಜನ್ಯಕ್ಕೂ ಸ್ಥಳೀಯ ಶಾಸಕ ವೈ.ಎನ್.ರುದ್ರೇಶಗೌಡ ಭೇಟಿ ನೀಡಲಿಲ್ಲ ಎಂದರು.
ಅರಕಲಗೂಡು ಗಂಗೂರು ಗ್ರಾಮದಲ್ಲಿ ದಲಿತರ ಜೀತ ಪದ್ಧತಿ ಜೀವಂತವಾಗಿದ್ದರೂ ಇಂದಿನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗಮನ ನೀಡಿಲ್ಲ ಎಂದು ಆರೋಪಿಸಿದರು. ಜೆಡಿಎಸ್ ಮುಖಂಡ ಕಾಂತರಾಜು ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement