ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಹರಕೆಯ ಕುರಿಯಲ್ಲ, ಬಿಜೆಪಿ ಶಿಸ್ತಿನ ಸಿಪಾಯಿ'

Rashmi Kasaragodu
Updated On : 2 Apr 2014, 2:31 am

ಬೇಲೂರು: ಬಿಜೆಪಿ ವರಿಷ್ಠರ ಸೂಚನೆಯಂತೆ ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದೇನೆ ಅಷ್ಟೆ. ನಾನು ಹರಕೆಯ ಕುರಿ ಅಲ್ಲ. ಚುನಾವಣೆ ಫಲಿತಾಂಶ ಹೊರ  ಬಂದ ದಿನ ತಿಳಿಯುತ್ತದೆ ಯಾರು ಹರಕೆಯ ಕುರಿ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅಭಿಪ್ರಾಯಪಟ್ಟರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಕೆಜೆಪಿ-ಬಿಜೆಪಿ ವಿಲೀನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತ ನನ್ನಲ್ಲಿ ಇತ್ತು, ಅದರೆ ಪಕ್ಷದ ಹಿರಿಯ ಮುಖಂಡರ ಅಭಿಲಾಷೆಯಂತೆ ಹಾಸನದಿಂದ ಸ್ಪರ್ಧೆ ಮಾಡುತ್ತಿದ್ದು, ಕ್ಷೇತ್ರದಲ್ಲಿ ಬಿಜೆಪಿಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ ಎಂದರು.
ಹಾಸನ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಪ್ರಭಾವಿ ಖಾತೆ ಹೊಂದಿದ್ದ ಮಂತ್ರಿಗಳನ್ನು ನೀಡಿದ ಜಿಲ್ಲೆ. ಆದರೆ, ಇನ್ನು ಆನೇಕ ಮೂಲ ಸಮಸ್ಯೆಗಳ ಆಗರವಾಗಿದೆ.
 ಜಿಲ್ಲೆಯಲ್ಲಿ ಪ್ರವಾಸ ಮಾಡುವಾಗ ಕುಡಿವ ನೀರಿನ ಅಭಾವ ಕ್ಷೇತ್ರದಲ್ಲಿ ತೀವ್ರವಾಗಿದ್ದು, ಕಳೆದ 20 ವರ್ಷದ ಬಿಗಿ ಆಡಳಿತದಲ್ಲಿ ಇವರು ಏನು ಮಾಡಿದ್ದಾರೆ ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷವನ್ನು ತರಾಟೆ ತೆಗೆದುಕೊಂಡರು.
ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ನಮ್ಮೊಂದಿಗೆ ಇದ್ದಾರೆ. ಅಲ್ಲದೆ ಕಳೆದ ನಾಲ್ಕು ದಿನದ ನಮ್ಮ ಜೊತೆ ಪ್ರವಾಸ ಮಾಡಿದ್ದಾರೆ.
ನಿಚ್ಚಳ ಬಹುಮತದೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ಮೋದಿ ಪ್ರಧಾನಿಯಾಗಲು ಹಾಸನದ ಕ್ಷೇತ್ರ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದರು. ನಾನು ಪ್ರಜಾತಂತ್ರ ವ್ಯವಸ್ಥೆಯನ್ನು ಬಲವಾಗಿ ನಂಬಿಕೆ ಇಟ್ಟುಕೊಂಡಿದ್ದು, ಜನರು ಪ್ರಜಾತಂತ್ರ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಾರೆ ಎಂದರು.
ಜಿಲ್ಲಾ ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement