ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಕಾರ್ಯಕ್ರಮ

Rashmi Kasaragodu
Updated On : 3 Apr 2014, 12:50 pm

ಅರಕಲಗೂಡು: ಇಲ್ಲಿನ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಸಮಾರಂಭದ ಅಂಗವಾಗಿ ಗಾಯಕಿ ಶ್ರೀಮತಿ ನಾಗಮಣಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಾಗೃತಿ ಜಾಥಾ
ಅರಕಲಗೂಡು: ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಬುಧವಾರದಂದು ಮಲ್ಲಿಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಮತದಾನದ ಬಗೆಗೆ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಕ್ಲಸ್ಟರ್ ಮಟ್ಟದ ಸಂಪನ್ಮೂಲವ್ಯಕ್ತಿಗಳು,ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಂ.ವಿ.ಜನಾರ್ಧನ್, ಜವರಯ್ಯ, ಎ.ಬಿ.ಎಂ ಹಳ್ಳಿಯ ಸಿಆರ್‌ಪಿ ಶಿವೇಗೌಡ, ದೊಡ್ಡಬೆಮ್ಮತ್ತಿ ಸಿ.ಆರ್.ಪಿ. ಮಮತ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಧರ್ಮಪ್ಪ, ಮಲೆನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಇತರರು ಪಾಲ್ಗೊಂಡಿದ್ದರು.
ಉಚಿತ ತರಬೇತಿ
ಹಾಸನ: ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗಿಗಳಿಗೆ ಹಲವಾರು ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೋಲಾರ್ ಸರ್ವೀಸಿಂಗ್, ಅಗರಬತ್ತಿ ತಯಾರಿಕೆ, ಹೋಮ್ ಕೆಮಿಕಲ್ ಪ್ರಾಡಕ್ಟ್ಸ್, ಅಣಬೆ ಬೇಸಾಯ, ಮೊಬೈಲ್ ರಿಪೇರಿ, ಕಂಪ್ಯೂಟರ್ ಟ್ಯಾಲಿ, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್ ವರ್ಕಿಂಗ್, ಅಕ್ವೇರಿಯಂ ಬಣ್ಣದ ಮೀನುಗಳು ಮತ್ತು ಮಾಂಸದ ಮೀನುಗಳ ಉತ್ಪಾದನೆ, ಎಲೆಕ್ಟ್ರಿಕಲ್ ಹೌಸ್ ವೈರಿಂಗ್ ಮತ್ತು ಮೋಟಾರ್ ರಿವೈಂಡಿಂಗ್, ಮಹಿಳೆಯರ ಸಿದ್ಧ ಉಡುಪುಗಳ ತಯಾರಿಕೆ, ಬ್ಯೂಟಿ ಪಾರ್ಲರ್, ಹೈನುಗಾರಿಕೆ ಮತ್ತು ಉದ್ಯಮಶೀಲತೆ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ತರಬೇತಿಯೊಂದಿಗೆ ಊಟ ಮತ್ತು ವಸತಿ ಉಚಿತವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಂಸ್ಥೆಯಿಂದ ಪಡೆದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ - ಉದ್ಯೋಗ ತರಬೇತಿ ಸಂಸ್ಥೆ, ಪಟೇಲ್ ಆರ್ಕೇಡ್, 60 ಅಡಿ ರಸ್ತೆ, ಉದ್ಭವ ಗಣೇಶ ದೇವಸ್ಥಾನದ ರಸ್ತೆ, ವಿವೇಕಾನಂದ ನಗರ, ಹಾಸನ, 08172-234460, 9900754638 ಇವರಿಗೆ ಸಲ್ಲಿಸುವುದು.
'ಅಂದಿಗೂ ಅಬಲೆ'
ಹಳೇಬೀಡು: ಮಹಾಭಾರತದಲ್ಲಿ ದ್ರೌಪದಿಯನ್ನು ಪಗಡೆಯಾಟದಲ್ಲಿ ಪಣವಾಗಿಟ್ಟ  ಪ್ರಸಂಗ ಹಾಗೂ ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಕಾಡಿಗೆ ಅಟ್ಟುವ ಸನ್ನಿವೇಶ ಹೆಣ್ಣು ಅಬಲೆ ಎಂಬುದನ್ನು ಸಾಕ್ಷೀಕರಿಸುತ್ತವೆ ಎಂದು ಹಾಸನ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿ. ಸುನಿತಾ ವಿಷಾದಿಸಿದರು. ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಶಾಸ್ತ್ರ ವೇದಿಕೆಯಿಂದ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಔದ್ಯೋಗಿಕ ಕ್ಷೇತ್ರದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಮಹಿಳೆಯರ ಹೋರಾಟ ಕ್ಷೀಣಿಸಿರುವುದರಿಂದ ಅವರನ್ನು ಹೊರಗಿಡಲಾಗಿದೆ ಎಂದು ಅವರು ಹೇಳಿದರು.
ಟ್ರಾಕ್ಟರ್ ಮಗುಚಿ
ವ್ಯಕ್ತಿ ಸಾವು
ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣದಲ್ಲಿ ಬುಧವಾರ ಸಂಭವಿಸಿದ ಟ್ರಾಕ್ಟರ್ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಮರಳು ಸಾಗಿಸುತ್ತಿದ್ದ ಟ್ರಾಕ್ಟರ್, ಪಟ್ಟಣದ ಕೋಟೆ ಕೆರೆ ಏರಿ ಮೇಲೆ ಅಪಘಾತಕ್ಕೀಡಾಗಿ ಚಾಲಕ ಮಾಗೋಡು ಚಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅರಕಲಗೂಡು ಪೊಲೀಸರು ದೂರು ದಾಖಲಿಸಿದ್ದಾರೆ.
6ರಿಂದ ಜಾತ್ರೆ
ಹಾರನಹಳ್ಳಿ: ಗ್ರಾಮದೇವತೆ ಶ್ರೀ ಕೋಡಮ್ಮ ದೇವಿಯ ಜಾತ್ರಾ ಮಹೋತ್ಸವವು ಏ. 6ರಿಂದ 11ರವರೆಗೆ ನಡೆಯಲಿದ್ದು ಏ. 10ರಂದು ಮಹಾರಥೋತ್ಸವ ನೆಡೆಯಲಿದೆ. ಏ. 6ರಂದು ಶಂಖತೀರ್ಥದಲ್ಲಿ ಗಂಗಾಪೂಜೆ, ಅಭಿಷೇಕ, ಕಂಕಣ ಬಂಧನ, ಸಹಸ್ರನಾಮಾರ್ಚನೆ, ಒಂದನೇ ಮದುವಣಗಿತ್ತಿ ಶಾಸ್ತ್ರ, 7ರಂದು ಎರಡನೇ ಮದುವಣಗಿತ್ತಿ    ಶಾಸ್ತ್ರ , 8ರಂದು ಶ್ರೀ ಸಿದ್ದರಾಮೇಶ್ವರ ಮತ್ತು ಕೋಡಮ್ಮ ದೇವಿಯವರ ಮೆರವಣಿಗೆ  ನಡೆಸಲಾಗುವುದು.


ಪೊಟ್ಯಾಟೊ ಅಭಿಮಾನಿಗಳ ಸಭೆ


ಅರಕಲಗೂಡು:  ಪೊಟ್ಯಾಟೊ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಯೋಗಾರವುಶ್‌ಅವರು ಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುಂದಿನ ರಾಜಕೀಯ ನಿಲುವು ತೆಗೆದುಕೊಳ್ಳುವ ಸಲುವಾಗಿ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳ ಸಭೆಯನ್ನು ಇದೇ ಏ. 6ರಂದು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಸಭೆ ಕರೆದಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು ತಮ್ಮ ಮುಂದಿನ ರಾಜಕೀಯ ಭವಿಷ್ಯ ಕುರಿತ ನಿರ್ಧಾರದ ಮೇಲೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪೊಟ್ಯಾಟೋ ಕ್ಲಬ್‌ನ ಮುಖಂಡರಾದ ಎಸ್.ಪಿ. ಜಯಪ್ಪ, ಹೊನ್ನವಳ್ಳಿ ಲೋಕೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಮಾದೇಶ್ ,ಶಶಿಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ವಾಟಾಳ್ ರಮೇಶ, ಶಶಿಕುಮಾರ್ ಸೇರಿದಂತೆ ಇತರ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement