ಪರಮೇಶ್ವರ್ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯ ದರ್ಶನ: ರೇವಣ್ಣ
ಹಾಸನ: ಕೆಪಿಸಿಸಿ ಅಧ್ಯಕ್ಷ ಕೆ.ಪಿ. ಪರಮೇಶ್ವರ್ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಅತ್ಯಂತ ಕೆಟ್ಟದಾಗಿ ಟೀಕಿಸಿರುವುದು ಕಾಂಗ್ರೆಸ್ ಸಂಸ್ಕೃತಿಯ ಪ್ರದರ್ಶನ ಎಂದು ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಖಂಡಿಸಿದ್ದಾರೆ.
ಗೌಡರನ್ನು ಬೈಯ್ಯುವುದರಿಂದ ಕಾಂಗ್ರೆಸಿಗರ ಹೊಟ್ಟೆ ತುಂಬುತ್ತೆ ಅನ್ನೋದಿದ್ದರೇ ಬೈಯ್ಯಲಿ. ಅದಕ್ಕೆ ನಾವೇನು ಮಾಡಲಿಕ್ಕೆ ಆಗದು. ಜನರು ಕ್ರಮ ಜರುಗಿಸಬೇಕು. ದೇವರು ನೋಡಿಕೊಳ್ಳಬೇಕು. ಗೌಡರು ಸಾಯಲಿ ಎಂದು ಹೇಳುವುದರಿಂದ ಗೌಡರ ಆಯುಷ್ಯ ಇನ್ನಷ್ಟು ಹೆಚ್ಚಾಗುತ್ತದೆ. ಸೋನಿಯಾ ಮೇಡಂ ಅವರು, ರಾಜ್ಯ ಕಾಂಗ್ರೆಸಿಗರಿಗೆ ಸರಿಯಾಗಿ ಮಾತನಾಡುವುದನ್ನು ಕಲಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.