ಸಿದ್ದಯ್ಯನಗರದಲ್ಲಿ ಬಿಜೆಪಿ ಬಿರುಸಿನ ಪ್ರಚಾರ
ಹಾಸನ: ಲೋಕಸಭಾ ಚುನಾವಣೆ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಬಿ.ಎಂ. ರಸ್ತೆ ಬಳಿ ಇರುವ ಸಿದ್ದಯ್ಯನಗರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.
ಸಿದ್ದಯ್ಯನಗರಕ್ಕೆ ಬಿಜೆಪಿ ಪಕ್ಷದವರು ಆಗಮಿಸುತಿದ್ದಂತೆ ನಿವಾಸಿಗಳು ಆರತಿ ಬೆಳಗಿ, ಯುಗಾದಿ ಹಬ್ಬದ ಹೊಸ ಉಡುಗೆಯನ್ನು ನೀಡಿ ಮನೆಗೆ ಬರ ಮಾಡಿಕೊಂಡರು. ಮುಸ್ಲಿಂ ಜನಾಂಗದವರಿಗೆ ಬೇವು-ಬೆಲ್ಲ ನೀಡಿ ಶುಭಾಶಯ ಹೇಳಿದರು. ಇದೇ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಜಿಲ್ಲಾಧ್ಯಕ್ಷ ರೇಣುಕುಮಾರ್, ಯುವ ಮೋರ್ಚಾ ಅಧ್ಯಕ್ಷ ಚನ್ನಕೇಶವ, ಕಾರ್ಯದರ್ಶಿ ನಾಗೇಶ್, ಮುಖಂಡರಾದ ಪ್ರಸನ್ನಕುಮಾರ್ ಇತರರು ಇದ್ದರು.