ಹಿಂದೂ ಜನಜಾಗೃತಿ ಸಮಿತಿಯಿಂದ ಸಡಗರದ ಯುಗಾದಿ ಆಚರಣೆ
ಹಾಸನ: ಸೃಷ್ಟಿ ನಿರ್ಮಿತಿಯ ಪ್ರಥಮ ದಿನವಾದ ಮತ್ತು ಶ್ರೀ ರಾಮನು ವಾಲಿಯ ವಧೆಯನ್ನು ಮಾಡಿದ ವಿಜಯೋತ್ಸವ ದಿನದ ಪ್ರತೀಕವಾದ ಯುಗಾದಿ ಹಬ್ಬವನ್ನು ಹಾಸನದ ಕೃಷ್ಣನಗರದ ಬಡಾವಣೆಯಲ್ಲಿ ಶಾಸ್ತ್ರೋಕ್ತವಾಗಿ ಬ್ರಹ್ಮಧ್ವಜವನ್ನು ಏರಿಸಿ ಪೂಜಾ ವಿಧಾನಗಳೊಂದಿಗೆ ಆಚರಿಸಲಾಯಿತು.
ಈ ಆಚರಣೆಯಲ್ಲಿ ಬ್ರಹ್ಮ ಧ್ವಜವನ್ನು ಏರಿಸುವ ಮಹತ್ವ, ವೈಶಿಷ್ಟಗಳ ಬಗ್ಗೆ ಬಂದಂತಹ ಭಕ್ತಾದಿಗಳಿಗೆ ಸನಾತನ ಸಂಸ್ಥೆಯ ಸೌ. ತಾರಾ ಹರ್ಷವರ್ಧನ ಶೆಟ್ಟಿ ಅವರು ಮಾಹಿತಿಯನ್ನು ತಿಳಿಸಿದರು. ಪೂಜೆಯನ್ನು ಹಿಂದೂ ಜನ ಜಾಗೃತಿ ಸಮಿತಿಯ ಹಾಸನ ಜಿಲ್ಲಾ ಸಮನ್ವಯಕರಾದ ರಮೇಶ್ ನಾಯಕ್ ಇವರು ಮಾಡಿದರು. ಹಾಗೂ ಬಂದ ಎಲ್ಲ ಭಕ್ತಾದಿಗಳು ಬ್ರಹ್ಮ ಧ್ವಜ್ವದ ಪೂಜೆಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ಎಲ್ಲರಿಗೂ ಬೇವು ಬೆಲ್ಲದ ಪ್ರಸಾದವನ್ನು ಹಂಚಿ, ಯುಗಾದಿ ಹಬ್ಬದ ಸಿ.ಡಿ ಯ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.
ಈ ವೇಳೆ ಸನಾತನ ಸಂಸ್ಥೆಯ ತಾರಾ ಹರ್ಷವರ್ಧನ ಶೆಟ್ಟಿ, ಸಮಿತಿಯ ರಮೇಶ್ ನಾಯಕ್ ಅವರು ಹಾಗೂ ಬಂದಂತಹ ಭಕ್ತರು ಇದ್ದರು.