ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೆಸರಿಗಷ್ಟೇ ಸಂತೆ!

Rashmi Kasaragodu
Updated On : 3 Apr 2014, 12:47 pm

ಹಾಸನ: ಚಂದ್ರಮಾನ ಯುಗಾದಿ ಹೊಸ ವರ್ಷದ ತೊಡಕಿನ ಹಿನ್ನೆಲೆಯಲ್ಲಿ ಮಂಗಳವಾರ ನಡೆಯುವ ಸಂತೆಗೆ ತರಕಾರಿ ಮಾರುವ ಹಾಗೂ ಕೊಳ್ಳುವವರ ಇಬ್ಬರ ಕೊರತೆ ಕಂಡು ಬಂದಿತು.
ನಗರದ ಎಂ.ಜಿ. ರಸ್ತೆ, ಸರ್ಕಾರಿ ಕಲಾ ಕಾಲೇಜಿನ ಮುಂಭಾಗದ ರಸ್ತೆ ಬದಿಯಲ್ಲಿ ಪ್ರತಿ ಮಂಗಳವಾರ ಭರ್ಜರಿ ಸಂತೆ ನಡೆಯುತ್ತದೆ. ತರಕಾರಿ ವ್ಯಾಪಾರ ಮಾಡುವವರು ಹೆಚ್ಚಾಗಿ ಇದ್ದು, ಈ ವೇಳೆ ರಸ್ತೆಯಲ್ಲಿ ವಾಹನ ಸಂಚರಿಸುವುದೇ ಕಷ್ಟವಾಗಿರುತ್ತಿತ್ತು. ಆದರೆ, ಈ ಬಾರಿಯ ಮಂಗಳವಾರ ಅಂತಹ ವಾತಾವರಣ ನಿರ್ಮಾಣವಾಗದೇ, ಕಡಿಮೆ ಸಂಖ್ಯೆಯಲ್ಲಿ ತರಕಾರಿ ಮಾರುವವರು ಇದ್ದರು. ಅಲ್ಲದೇ, ಕೊಳ್ಳುವವರ ಸಂಖ್ಯೆಯೂ ಬೆರಳೆಣಿಕೆಯಷ್ಟಿತ್ತು. ತರಕಾರಿ ಬೆಲೆಗಳು ಮಾತ್ರ ಎಂದಿನಂತೆ ಇದ್ದು, ಯಾವುದೇ ಬದಲಾವಣೆ ಕಂಡುಬರಲಿಲ್ಲ.


ವರುಣನ ಆಗಮನ
ಅರಕಲಗೂಡು:  ಬಿಸಿಲ ಬೇಗೆಯಿಂದ ತತ್ತರಿಸಿದ್ದ ತಾಲೂಕಿನ ಜನತೆಗೆ ಮಂಗಳವಾರ ರಾತ್ರಿ ಸುರಿದ ಮಳೆ ತುಸು ಸಂತಸಕ್ಕೆ ಕಾರಣವಾಯಿತು. ಕಾಲಮಾನಕ್ಕೆ ತಕ್ಕಂತೆ ಮಳೆ ಸುರಿದು ಬಿಸಿಲಿನ ಜಳ ತಗ್ಗಿಸಿದ ಮಳೆ ಹಿತವೆನಿಸಿತು. ರಾತ್ರಿ ಸುಮಾರು 12 ಗಂಟೆ ವೇಳೆಗೆ ಆರಂಭಗೊಂಡ ಮಳೆ ಸುಮಾರು 2 ಗಂಟೆವರೆಗೆ ಎಡೆಬಿಡದೆ ಸುರಿಯಿತು.  ಮಳೆ ವಿವರ ಇಂತಿದೆ. ಅರಕಲಗೂಡು- 8.3 ಮಿ.ಮೀ., ಪಟ್ಟಣ-14.0 ಮಿ.ಮೀ,ದೊಡ್ಡಮಗ್ಗೆ - 2.2 ಮಿ.ಮೀ, ಬಸವಾಪಟ್ಟಣ-14.3 ಮಿ.ಮೀ,ರಾಮನಾಥಪುರ-3.4 ಮಿ.ಮೀ, ಕೊಣನೂರು-4.6 ಮಿ.ಮೀ, ದೊಡ್ಡಬೆಮ್ಮತ್ತಿ- 8.2 ಮಿ.ಮೀ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement