ಎವಿಕೆ ಕಾಲೇಜಿನಲ್ಲಿ ದತ್ತಿ ಉಪನ್ಯಾಸ
ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ, ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜಿನ ವತಿಯಿಂದ ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜಿನ ರಜತ ಮಹೋತ್ಸವದ ನೆನಪಿನ 21ನೇ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏ. 4ರಂದು ಬೆಳಗ್ಗೆ 10ಕ್ಕೆ ನಗರದ ಹಾರನಹಳ್ಳಿ ರಾಮಸ್ವಾಮಿ ಸುಶೀಲಮ್ಮ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಶಾಸ್ತ್ರೀಯ ಸಂಗೀತಕ್ಕೆ ಕನ್ನಡದ ಕೊಡುಗೆ ಕುರಿತು ಗಾನಕಲಾ, ಸಂಗೀತ ವಿದ್ಯಾನಿಧಿ ವಿದ್ವಾನ್ ಆರ್.ಕೆ. ಪದ್ಮನಾಭ ಉಪನ್ಯಾಸ ನೀಡುವರು. ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ವಿ.ಕೆ. ಕಾಲೇಜಿನ ಉಪಾಧ್ಯಕ್ಷ ಬಿ.ಆರ್. ಗುರುದೇವ್, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಖಜಾಂಚಿ ಆರ್. ಶೇಷಗಿರಿ ಹಾಗೂ ಎ.ವಿ.ಕೆ. ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಜಿ.ಟಿ. ಕುಮಾರ್ ಭಾಗ ವಹಿಸುವರು. ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲೆ ಡಾ. ಜೆ. ಶೈಲಜಾಕುಮಾರಿ ಭಾಗವಹಿಸುವರು.