ಕಾಂಗ್ರೆಸ್ನಿಂದ ದಲಿತರಿಗೆ ಅನೇಕ ಯೋಜನೆ: ಡಿ.ಸಿ. ಸಣ್ಣಸ್ವಾಮಿ
ಸಕಲೇಶಪುರ: ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡುವ ಮೂಲಕ ಕಾಂಗ್ರೆಸ್, ದಲಿತರಿಗೆ ಆರ್ಥಿಕವಾಗಿ ಬಲಗೊಳ್ಳುವ ಅನೇಕ ಯೋಜನೆಗಳನ್ನು ನೀಡಿದೆ ಎಂದು ರಾಜ್ಯ ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಡಿ.ಸಿ. ಸಣ್ಣಸ್ವಾಮಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಎಸ್ಸಿ, ಎಸ್ಟಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಬಜೆಟ್ನಲ್ಲಿ ರು. 15 ಸಾವಿರ ಕೋಟಿ ದಲಿತರಿಗಾಗಿ ಕಾಂಗ್ರೆಸ್ ಮೀಸಲಿರಿಸಿ ಇತಿಹಾಸ ನಿರ್ಮಿಸಿದೆ. ದಲಿತರು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಕಾಂಗ್ರೆಸ್ ಪಕ್ಷ ಪೂರಕವಾದ ಯೋಜನೆಗಳನ್ನು ರೂಪಿಸಿದೆ. ರು. 50 ಲಕ್ಷ ಗುತ್ತಿಗೆಯಲ್ಲಿ ಶೇ. 25ರಷ್ಟು ಗುತ್ತಿಗೆಗಳನ್ನು ದಲಿತರಿಗಾಗಿ ಮೀಸಲಿರಿಸಿದೆ. ಇದರಿಂದ ಅನೇಕ ಎಸ್ಸಿ, ಎಸ್ಟಿಗಳಿಗೆ ಆಸರೆಯಾಗಿದೆ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ರು. 1820 ಕೋಟಿ ಸಾಲ ಮನ್ನಾ ಮಾಡುವ ಮೂಲಕ ದಲಿತರಿಗೆ ಹೊರೆಯಾಗಿದ್ದ ಸಾಲದ ಬಾಧೆಯನ್ನು ತಪ್ಪಿಸಿದೆ. ಇಂತಹ ನಿಲುವನ್ನು ಬೇರೆ ಯಾವುದೇ ಸರಕಾರವು ತೆಗೆದುಕೊಂಡಿರಲಿಲ್ಲ. ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ಮೂಲಕ ಕಡು ಬಡತನದಲ್ಲಿದ್ದ ದಲಿತರಿಗೆ ಅನುಕೂಲಕರ ಮಾಡಿಕೊಟ್ಟಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿದರು. ದೊಡ್ಡೀರಯ್ಯ, ಪರ್ವತಯ್ಯ, ಕಾಡಪ್ಪ, ನಿಂಗರಾಜು, ಕುಮಾರಯ್ಯ ಇತರರು ಇದ್ದರು.