ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಂಗ್ರೆಸ್ನಿಂದ ಸುಭದ್ರ ಸರ್ಕಾರ: ಜವರೇಗೌಡ

Rashmi Kasaragodu
Updated On : 4 Apr 2014, 1:58 am

ಜಾವಗಲ್: ಕಾಂಗ್ರೆಸ್ನಿಂದ ಮಾತ್ರ ಸುಭದ್ರ ಆಡಳಿತ ನಡೆಸುವುದು ಎಂದು ಕಾಂಗ್ರೆಸ್ ಧುರೀಣ ಎಚ್.ಕೆ. ಜವರೇಗೌಡ ಹೇಳಿದ್ದಾರೆ.
ಜಾವಗಲ್ ಹಾಗೂ ಸಂಕಿಹಳ್ಳಿ ಗ್ರಾಮಗಳಲ್ಲಿ ಕಾರ್ಯಕರ್ತರು ಹಾಗೂ ಹಿತೈಷಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜನ ಸಾಮಾನ್ಯರ ಜೀವನ ಮಟ್ಟ ಸುಧಾರಣೆಗಾಗಿ ಅನ್ನಭಾಗ್ಯ, ಕ್ಷೀರ ಭಾಗ್ಯ, ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾ ಸಿರಿ ವಿಧ್ಯಾರ್ಥಿ ವೇತನ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ವರ್ಗದವರ ಸಾಲಮನ್ನಾ, ಮನಸ್ವಿನಿ ಸೇರಿದಂತೆ ಹಲವಾರು ಯೋಜನೆ ಜಾರಿಗೆ  ತಂದಿದೆ ಎಂದರು.
ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು  ಅರಸೀಕೆರೆ ಮತ್ತು ಬೇಲೂರು ತಾಲ್ಲೂಕಿನ ಜಾವಗಲ್, ಹಳೇಬೀಡು, ಮಾದೀಹಳ್ಳಿ ಹೋಬಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಬದ್ಧವಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಡಾ. ಮುನಿಸ್ವಾಮಿ, ಎಸ್ಸಿ ಮತ್ತು ಎಸ್ಟಿ ಮುಖಂಡ ಕೆಟಿ ಮಂಜಯ್ಯ, ತಾಪಂ ಸದಸ್ಯೆ ಲಕ್ಷ್ಮಿ, ಮಾಜೀ ಗ್ರಾಪಂ ಅಧ್ಯಕ್ಷ ಜೆಡಿ ಧನಂಜಯ, ಮಾಜೀ ಉಪಾಧ್ಯಕ್ಷ ರಾಜೇಗೌಡ, ಗ್ರಾಪಂ ಸದಸ್ಯ ಜೆ.ಕೆ.ಪ್ರಭಾಕರ್, ಜಾವಗಲ್ ಮಂಜುನಾಥ್ ಖಲೀಲ್, ಅಬ್ದುಲ್ ಜಲೀಲ್, ಫಿರೋಜ್ ಗಾಂಧಿ, ಇಬ್ರಾಹಿಂ, ಭಾನು ಪ್ರಕಾಶ್, ರಂಗನಾಥ್, ಸಂಕಿಹಳ್ಳಿ ಸದಾಶಿವ, ಈಶಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement