ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪೊಲೀಸ್ ಪಥ ಸಂಚಲನ

Rashmi Kasaragodu
Updated On : 4 Apr 2014, 2:01 am


ಅರಸೀಕೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಾರ್ಖಂಡ್ನಿಂದ ಅರಸೀಕೆರೆ ತಾಲ್ಲೂಕಿಗೆ ನಿಯೋಜಿತವಾಗಿರುವ ಅರೆಮಿಲಿಟೆರಿ ಪಡೆಯ ಸಿಬ್ಬಂದಿ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಬಾಣಾವರದ ಸಬ್ ಇನ್ಸ್ಪೆಕ್ಟರ್ ಭಾನು ನೇತೃತ್ವದಲ್ಲಿ ಮಾಡಾಳು ಗ್ರಾಮದಲ್ಲಿ ಮಂಗಳವಾರ ಪಥ ಸಂಚಲನ ನಡೆಸಿದರು.
ಮಾಹಿತಿ: ಪಥ ಸಂಚಲನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನಿಲ್ ಮತದಾರರಲ್ಲಿ ಚುನಾವಣೆ ಬಗ್ಗೆ ಇರುವ ಅನಗತ್ಯ ಆತಂಕ ದೂರ ಮಾಡಿ ನಿರ್ಭೀತಿಯಿಂದ ಮತದಾನ ಮಾಡಬೇಕೆಂಬ ದೃಷ್ಟಿಯಿಂದ ಪಥ ಸಂಚಲನ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.
ಆತ್ಮಸ್ಥೈರ್ಯ ಮೂಡಿಸುವ ಕೆಲಸ: ಅರಸೀಕೆರೆಯಿಂದ ಹೊರಟ ತಂಡ ಬೊಮ್ಮೇನಹಳ್ಳಿ, ಅಗ್ಗುಂದ, ಜಿ. ಶಂಕರನಹಳ್ಳಿ, ಜೆಸಿಪುರ, ಡಿಎಂಕುರ್ಕೆ ಹಾಗೂ ಮಾಡಾಳು ಸೇರಿದಂತೆ ವಿವಿದೆಡೆ ಪಥ ಸಂಚಲನ ನಡೆಸಲಾಗುತ್ತಿದೆ. ಮತದಾರರು ಯಾವುದೇ ಭಯವಿಲ್ಲದೇ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಹೀಗಾಗಿ ಅವರಲ್ಲಿ ಆತ್ಮಸ್ಥೆರ್ಯ ಮೂಡಿಸುವ ಕೆಲಸ ಇದಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರ ಠಾಣೆಯ ಪಿ.ಎಸ್.ಐ. ಅಯ್ಯನ್ ಗೌಡ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement