ಅರಕಲಗೂಡಲ್ಲಿ ಕಾವ್ಯವಾಚನ ಇಂದು
ಅರಕಲಗೂಡು: ಇಲ್ಲಿನ ಶ್ರೀ ಕೋದಂಡರಾಮ ದೇವಾಲಯದಲ್ಲಿ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ಅಭಿಷೇಕ ಮತ್ತು ಸಂಜೆ 6 ಗಂಟೆಗೆ ಕಾವ್ಯವಾಚನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗಣೇಶ ಉಡುಪ ಕಾವ್ಯ ವಾಚನ ಮಾಡಲಿದ್ದು, ರುಕ್ಮಿಣಿ ನಾಗೇಂದ್ರ ಅವರು ವ್ಯಾಖ್ಯಾನ ಮಾಡುವರು.