ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂರಿನಲ್ಲಿ ಜೆಡಿಎಸ್ ಪ್ರಚಾರಕ್ಕೆ ಚಾಲನೆ

Rashmi Kasaragodu
Updated On : 5 Apr 2014, 1:55 am

ಆಲೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮತ ನೀಡುವಂತೆ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮನವಿ ಮಾಡಿದರು.
ಅವರು ಪಟ್ಟಣದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಷ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ದೂರವಿಟ್ಟು ತೃತೀಯ ರಂಗವನ್ನು ಪ್ರೋತ್ಸಾಹಿಸಬೇಕು. ದೇವೇಗೌಡರು ಪುನಃ ಪ್ರಧಾನಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿರುವುದರಿಂದ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದರು.  ಈ ಸಮಸ್ಯೆಗಳು ಬಗೆಹರಿಯಬೇಕಾದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೈ ಬಲಪಡಿಸಿ ರಾಷ್ಟ್ರಮಟ್ಟದಲ್ಲಿ ಜೆಡಿಎಸ್ ಬೆಂಬಲಿತ, ಸರ್ಕಾರ ರಚನೆಯಾಗಬೇಕು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ವಿವರಿಸಿದರು.
ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಾಡಿದ ಜನಪರ ಕಾರ್ಯಗಳನ್ನು ಜನ ಮರೆತಿಲ್ಲ ಎಂದ ಅವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಈ ಹಿಂದಿನ ಮುಖ್ಯಮಂತ್ರಿಗಳ್ಯಾರೂ ಮಾಡಲು ಸಾಧ್ಯವಾಗಲಿಲ್ಲ.
 ಈ ಎಲ್ಲಾ ವಿಚಾರಗಳು ಜನತೆಗೆ ತಿಳಿದ್ದಿದೆ. ಹಾಗಾಗಿ, ಈ ಬಾರಿ ದೇವೇಗೌಡ ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರ ದಿಂದ ಗೆಲ್ಲಿಸುತ್ತಾರೆ ಎಂದರು.
ಪಟ್ಟಣ ಪಂಚಾಯ್ತಿ ಅದ್ಯಕ್ಷೆ ನೀಲುಫರ್, ಉಪಾಧ್ಯಕ್ಷೆ ಜಯ್ಯಮ್ಮ, ತಾಪಂ ಅಧ್ಯಕ್ಷೆ ಯಶೋಧಹರಿಷ್, ಸದಸ್ಯರಾದ ಜೀವನ್, ಜೆಡಿಎಸ್ಮುಖಂಡರಾದ ಕೆ.ಸುಬ್ಬಶೆಟ್ಟಿ, ಎಚ್.ಎಸ್. ಜಯರಾಮ್, ಎಂ.ಬಿ. ವಿಜಯಕಾಂತ್, ಶಂಕ್ರಾಚಾರ್, ಮುಮ್ತಾಜ್ ಷರೀಫ್, ರಾಮಚಂದ್ರು, ಕಬೀರ್ ಅಹಮದ್, ಗಂಗಾ, ಯೋಗಣ್ಣ, ವೀರಭದ್ರಸ್ವಾಮಿ, ವಿರುಪಾಕ್ಷಪ್ಪ.ಸಗನಯ್ಯ, ಅರಸಪ್ಪ, ಬಸವರಾಜು, ಮೂರ್ತಿ ಹಾಗೂ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement