ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಂದಿಗೂ ಮುಗ್ಧತೆ ಕಳೆದುಕೊಳ್ಳಬೇಡಿ: ನಟ ಅರುಣ್ ಸಾಗರ್

Rashmi Kasaragodu
Updated On : 5 Apr 2014, 1:56 am

ಮೈಸೂರು: ಮುಗ್ಧತೆಯ ಮನಸ್ಸುಳ್ಳವರ ಮುಖ ಮಗುವಿನಂತಿರುತ್ತದೆ. ಹಾಗಾಗಿ ಎಂದಿಗೂ ಮುಗ್ಧತೆ ಕಳೆದುಕೊಳ್ಳಬೇಡಿ ಎಂದು ಬಿಗ್ಬಾಸ್ ಖ್ಯಾತಿಯ ನಟ ಅರುಣ್ಸಾಗರ್ ಅಭಿಪ್ರಾಯಪಟ್ಟರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿರುವ ಅಧ್ಯಾಪಕರನ್ನು ನೋಡಿದರೆ ಮುಗ್ಧತೆ ಪ್ರತಿಬಿಂಬಿಸುತ್ತಿದೆ. ಮುಗ್ಧತೆ ಇದ್ದುದ್ದರಿಂದಲೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎಂಬ ಭೇದಭಾವವೇ ಗೊತ್ತಾಗುತ್ತಿಲ್ಲ ಎಂದರು. ಸಾಂಸ್ಕೃತಿಕ ನಗರಿಯಲ್ಲಿರುವ ಮಹಾರಾಣಿ ಕಾಲೇಜು ತನ್ನದೇ ಆದ ಖ್ಯಾತಿ ಹೊಂದಿದೆ. ಮಹಾರಾಜರ ಕೊಡುಗೆಯಾಗಿರುವ ಈ ಕಾಲೇಜಿನ ವಿದ್ಯಾರ್ಥಿನಿಯರಾದ ನೀವು ಹೊಸತನ ಸೃಷ್ಟಿಸಿ. ನಾನೊಬ್ಬ ಕಲಾವಿದನಾಗಿ ಈ ವೇದಿಕೆ ಶೃಂಗಾರವಾಗದೆ ಇರುವುದು ಬೇಸರ ತಂದಿದೆ. ಮುಂದಿನ ವರ್ಷ ಕಾಲೇಜಿನ ಶೃಂಗಾರ ಕೆಲಸವನ್ನು ನೀವೇ ವಹಿಸಿಕೊಂಡು ನಳನಳಿಸಿ ಎಂದು ಕರೆ ನೀಡಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ. ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸುಂದರರಾಜ್ ಅರಸ್, ಸ್ಟೇಜ್ ಷೋ ಸಂಸ್ಥೆಯ ಮಾಲೀಕ ಡಾ. ಹರೀಶ್ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement